PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Bombay jayashree: ಪ್ರಜ್ಞಾಹೀನ ಸ್ಥಿತಿಯಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪತ್ತೆ

March 24, 2023

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

March 24, 2023

ಹಿಂಡೆನ್ ಬರ್ಗ್ ವರದಿ ಬಳಿಕ ಜಾಕ್ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

March 24, 2023
Facebook Twitter Instagram
Friday, March 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ: ಸಿ.ಟಿ ರವಿ
ಜಿಲ್ಲೆ Prajatv KannadaBy Prajatv KannadaMarch 14, 2023

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ: ಸಿ.ಟಿ ರವಿ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ವಿಜಯಪುರ: ಕಾಂಗ್ರೆಸ್ (Congress)  ಮತ್ತು ಜೆಡಿಎಸ್‌ನಲ್ಲಿ (JDS) ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ. ಈ ಎರಡೂ ಪಕ್ಷದಲ್ಲೂ ಅನುವಂಶೀಯ ನಾಯಕತ್ವವಿದೆ. ಈ ಎರಡೂ ಪಕ್ಷಗಳಿಗೂ ಪ್ರಜಾಪ್ರಭುತ್ವದ (Democracy) ಮೇಲೆ ನಂಬಿಕೆ ಇಲ್ಲ. ಆದರೆ ಬಿಜೆಪಿಗೆ (BJP) ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.

ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿಯಲ್ಲಿ ಸೋಮವಾರ ಬಿಜೆಪಿ ವಿಜಯಸಂಕಲ್ಪ ಯಾತ್ರೆ (Vijaya Sankalpa Yatra) ಕೈಗೊಂಡಿದ್ದು, ಯಾತ್ರೆಗೂ ಮುನ್ನ ಬಿಜೆಪಿ ನಾಯಕರ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಪಕ್ಷವು ಜನ ಸಾಮಾನ್ಯರ ನೇತೃತ್ವದಿಂದ ಬೆಳೆದು ಬಂದಿದ್ದು, ನೀತಿಗೆ ಅಂಟಿಕೊಂಡಿದೆ. ರಾಜೀವ್ ಗಾಂಧಿ (Rajiv Gandhi) ಇದ್ದ ಸಂದರ್ಭದಲ್ಲಿ ಕಳ್ಳರೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಇದು ರಾಜೀವ್ ಗಾಂಧಿಯವರಿಗೂ ಗೊತ್ತಿತ್ತು. ನಮಗೆ ನಿಯತ್ತಿದೆ. ನಾವು ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮತಗಳನ್ನು ಕೇಳುತ್ತೇವೆ. ಪ್ರಣಾಳಿಕೆಯಲ್ಲಿ ಹೇಳದೇ ಇರುವಂತಹ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಅಲ್ಲದೇ ಅದರ ಕೆಲಸಗಳನ್ನು ಯಾರಿಗೂ ಹೇಳದೆ ಮಾಡಿ ತೋರಿಸಿದ್ದೇವೆ ಎಂದರು

ಇದೇ ವೇಳೆ ಮಾಜಿ ಸಚಿವ ಎಂ.ಬಿ ಪಾಟೀಲ್ (M.B.Patil) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಕೆರೆ ತುಂಬುವ ಯೋಜನೆಯನ್ನು ನಿಮ್ಮದೇ ಸರ್ಕಾರ ತಿರಸ್ಕಾರ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆಗೆ ಅನುಮತಿ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಕೆರೆ ತುಂಬುವ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನೀವೂ ಅದೇ ಯೋಜನೆಯ ಹೆಸರಿನಲ್ಲಿ ಫೋಟೋ ಹಾಕಿಕೊಳ್ಳುತ್ತೀರಿ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ವಾರೆಂಟ್ ಅವಧಿ ಮುಗಿದಿದೆ. ಇನ್ನು ವಾರೆಂಟಿ ಕಾರ್ಡ್ ನೀಡಿ ಏನು ಪ್ರಯೋಜನ? ಎಲ್ಲಾ ಕಡೆಯೂ ಕಾಂಗ್ರೆಸ್ ಪಕ್ಷ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಇಷ್ಟಕ್ಕೂ ನೀವು ಕೊಡುತ್ತಿರುವುದು ಫಾಲ್ಸ್ ಕಾರ್ಡ್ ಎಂಬುವುದು ಜನರಿಗೆ ಗೊತ್ತಿದೆ. ನೀವು ಅಧಿಕಾರದಲ್ಲಿ ಇದ್ದ ಸಂದರ್ಭ ಇದನ್ನು ಅನುಷ್ಠಾನಕ್ಕೆ ತಂದಿದ್ದರೆ ಅದೊಂದು ಮಾದರಿಯಾಗುತ್ತಿತ್ತು. ನೀವು ಈ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದರೆ ಅದು ಸತ್ಯದ ಮಾತಾಗುತ್ತಿತ್ತು. ಈ ಫಾಲ್ಸ್ ಕಾರ್ಡ್‌ಗೆ ಮೂರು ಕಾಸಿನ ಕಿಮ್ಮತ್ತು ಕೂಡಾ ಇಲ್ಲ. ಹಾಗಾಗಿ ಫಾಲ್ಸ್ ಕಾರ್ಡ್ ವಿರುದ್ಧ ನಾವು ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ಕೆಲಸ ಮಾಡಿರುವುದನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ (Siddaramaiah) ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತದೆ. ಈ ಹಿಂದೆ ಮೋದಿ ಪ್ರಧಾನಿ ಆಗುವುದಿಲ್ಲ ಎಂದಿದ್ದರು, ಆದರೆ ಮೋದಿ (Narendra Modi) ಪ್ರಧಾನಿಯಾದರು. ಯಡಿಯೂರಪ್ಪ (Yediyurappa) ಸಿಎಂ ಆಗುವುದಿಲ್ಲ ಎಂದರು, ಆದರೆ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಇನ್ನುಮುಂದೆ ಸಿದ್ದರಾಮಯ್ಯನವರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಚಾರ ಮಾಡಬೇಕು ಎಂದು ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ಮಹಾದ್ವಾರ ತೆರವು ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾದ್ವಾರ ತೆರವು ಮಾಡಿದ್ದು ಅಕ್ಷಮ್ಯ ಅಪರಾಧ. ದೊಡ್ಡ ನಂಜೇಗೌಡ ಹಾಗೂ ಉರಿಗೌಡ ಅವರು ಟಿಪ್ಪುವನ್ನು ಹತ್ಯೆ ಮಾಡಿದರು. ಯಾಕೆ ಹತ್ಯೆ ಮಾಡಿದರು ಎಂಬ ಸತ್ಯ ಹೊರಬರಬೇಕಾಗಿದೆ. ಅವರಿಗೆ ಇತಿಹಾಸದಲ್ಲಿ ಯಾವ ಗೌರವ ಸಿಗಬೇಕಾಗಿತ್ತೋ ಆ ಗೌರವ ಸಿಕ್ಕಿರಲಿಲ್ಲ. ಅವರಿಗೆ ಮತ್ತೆ ಆ ಗೌರವ ಸಿಗಬೇಕು. ಅದಕ್ಕಾಗಿ ಆ ದ್ವಾರ ಹಾಕಿದ್ದು ಸರಿಯಾಗಿದೆ. ಆ ದ್ವಾರವನ್ನು ತೆರವು ಮಾಡಿದ್ದು ತಪ್ಪು. ಜನರ ಮೂಲಕ ಶಾಶ್ವತವಾಗಿ ಆ ದ್ವಾರವನ್ನು ನಿರ್ಮಾಣ ಮಾಡಲು ಬೇಕಾದ ಶಕ್ತಿಯನ್ನು ನಾವು ಮಂಡ್ಯ(Mandya) ಜನರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

Share. Facebook Twitter WhatsApp Pinterest LinkedIn Tumblr Telegram Email

Related Posts

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 53 ಲಕ್ಷ ನಗದು ವಶಕ್ಕೆ ಪಡೆದ ಗರಗ ಪೊಲೀಸರು

March 24, 2023

4 ವರ್ಷಗಳ ನಂತ್ರ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ

March 24, 2023

ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಸೇವಿಸಿದ ಸಚಿವ ಅಮಿತ್ ಶಾ

March 24, 2023

ಹೆಣ್ಣುಮಕ್ಕಳು ಮೈತ್ರಿ ಮುಟ್ಟಿನ ಕಪ್ ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ

March 23, 2023

ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ: ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ

March 23, 2023

ಗ್ರಾಮೀಣ ಕ್ರೀಡೆ ಬಗ್ಗೆ ಜನರ ಆಸಕ್ತಿ : ಹೋರಿ ಸ್ಪರ್ಧೆ ನೊಡಲು ಸೇರಿದ ನೂರಾರು ಜನ.

March 23, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.