ಕೋಪವನ್ನು ನಿಯಂತ್ರಿಸುವ ಸಾಧನಗಳಲ್ಲಿ ಯೋಚಿಸಿ ಮಾತನಾಡುವುದು ಮುಖ್ಯವಾಗಿದೆ. ಕೋಪ ಬರುವ ಯಾವುದೇ ವಿಚಾರ ನಿಮ್ಮ ಮುಂದೆ ಪ್ರಸ್ತಾಪವಾಗುತ್ತಿದ್ದರೆ ಅಲ್ಲಿಂದ ಜಾಗ ಖಾಲಿ ಮಾಡುವುದೇ ಲೇಸು
ನಗು
ನಗುವಿಗೆ ನಮ್ಮ ಕೋಪವನ್ನು ಕಂಟ್ರೋಲ್ ಮಾಡುವ ಶಕ್ತಿ ಇದೆ ಎಂದರೆ ನೀವು ನಂಬಲೇಬೇಕು. ನೀವು ಕೋಪಗೊಂಡಾಗ ಮನಸಾರೆ ಜೋರಾಗಿ ನಕ್ಕು ಬಿಡಿ. ಇದರಿಂದ ನಿಮ್ಮ ಕೋಪ ಥಟ್ಟನೆ ಕಡಿಮೆಯಾಗುತ್ತದೆ.
ಶಾಂತವಾಗಿರಿ
ಹೆಚ್ಚು ಕೋಪಗೊಂಡಾಗ ತಲೆ ಬಿಸಿಯಾಗುತ್ತದೆ. ಯಾವುದೇ ಸಂತೋಷದ ಸಮಯವನ್ನು ಕಳೆಯಲು ಕಷ್ಟವಾಗುತ್ತದೆ. ಹೀಗೆ ಕೋಪ ಮಾಡಿಕೊಳ್ಳುವ ಪರ್ಯಾಯವಾಗಿ ಮನಸ್ಸಿನ ಮೇಲೆ ಕೇಂದ್ರೀಕರಿಸಿ ಶಾಂತ ಮನಸ್ಸಿನಿಂದ ಕುಳಿತುಕೊಳ್ಳಿ.
ವಾಕ್ ಮಾಡಿ
ನೀವು ತುಂಬಾ ಕೋಪ ಹೊಂದಿದ್ದಾಗ ನೀವು ಮಾಡಬೇಕಾಗಿರುವುದು ಇಷ್ಟೇ ಸ್ಥಳದಿಂದ ಹೊರ ನಡೆಯಿರಿ. ಮನಸ್ಸಿಗೆ ಪ್ರಶಾಂತತೆಯನ್ನು ಉಂಟು ಮಾಡುವ ಸ್ಥಳಕ್ಕೆ ನಡೆಯಿರಿ. ಉದಾಹರಣೆಗೆ ನಿಮ್ಮ ಸ್ನೇಹಿತರಿರುವ ಸ್ಥಳ ಅಥವಾ ಉದ್ಯಾನವನ. ಇವು ನಿಮ್ಮ ಕೋಪವನ್ನು ಹಠಾತ್ ಆಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಸ್ನಾಯುಗಳನ್ನು ವಿಶ್ರಾಂತಿ ಮಾಡಿ
ಕೋಪಾದ್ರಿಕ್ತ ಸಮಯದಲ್ಲಿ ದೇಹವು ಅನೇಕ ಬದಲಾವಣೆಯನ್ನು ಕಾಣುತ್ತದೆ. ಈ ಸಮಯದಲ್ಲಿ ಸ್ನಾಯುವಿನ ವಿಶ್ರಾಂತಿಯು ಬಹಳ ಮುಖ್ಯವಾಗಿದೆ. ನಿಮ್ಮ ದೇಹದಲ್ಲಿನ ವಿವಿಧ ಸ್ನಾಯು ಗುಂಪುಗಳನ್ನು ಒಂದೊಂದಾಗಿ ಉದ್ವಿಗ್ನಗೊಳಿಸಲು ಮತ್ತು ನಿಧಾನವಾಗಿಸಲು ಸಮಾಧಾನವಾಗಿರಿ.
ಕ್ಷಮಿಸಿ ಬಿಡಿ
ನಿಮ್ಮ ಕೋಪಕ್ಕೆ ಕಾರಣವಾದ ವ್ಯಕ್ತಿಯನ್ನು ಕ್ಷಮಿಸಿ ಬಿಡಿ. ಇದು ಅವರಿಗಾಗಿ ಅಲ್ಲ, ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಇದನ್ನು ಮಾಡಲು ಸಾಕಷ್ಟು ಭಾವನಾತ್ಮಕ ಕೌಶಲ್ಯ ಬೇಕಾಗುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ನೀವು ಅವರನ್ನು ಕ್ಷಮಿಸುತ್ತಿದ್ದೀರಿ ಎಂದು ನೀವು ನಟಿಸಬಹುದು.