ಬೆಂಗಳೂರು: 8ನೇ ತರಗತಿಯ ನಂತರ ಕನ್ನಡ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಾರದು ಎಂದು ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.
ನಗರದ ಚಾಲುಕ್ಯ ವೃತ್ತದ ಬಳಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 50 ಕ್ಕೂ ಹೆಚ್ಚು ಮಕ್ಕಳ ಪೋಷಕರು ಪಠ್ಯಕ್ರಮದಿಂದ ಕನ್ನಡ ಭಾಷೆ ಕೈಬಿಡುವಂತೆ ಶಾಲೆಯನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದಾರೆ.
ಪಠ್ಯಕ್ರಮದಲ್ಲಿ ಕನ್ನಡದ ಬದಲು ಇಂಗ್ಲಿಷ್ ಸೇರಿಸಿದರೆ ಮಕ್ಕಳು ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದಾಗ ಅನುಕೂಲವಾಗುತ್ತದೆ ಎಂದು ಪೋಷಕರು ವಾದ ಮಾಡಿದ್ದಾರೆ.
ಈ ಮಧ್ಯೆ, ಪಠ್ಯಕ್ರಮದಿಂದ ಕನ್ನಡ ಭಾಷೆಯನ್ನು ಕೈಬಿಡಬೇಕೆಂಬ ಪೋಷಕರ ಆಗ್ರಹದ ವಿರುದ್ಧ ಕನ್ನಡ ಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ವಿರೋಧಿಸುತ್ತಿರುವ ಶಾಲೆ ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.