ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಸುಲಭವಾದ ಆಹಾರವೆಂದರೆ ಅದು ನಿಂಬೆಹಣ್ಣು.ನಿಂಬೆಹಣ್ಣು ಹೇಗೆ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಅಂತ ನೀವು ಯೋಚಿಸುತ್ತಿದ್ದರೆ, ಈ ಲೇಖನ ನಿಮಗೆ ಉತ್ತರ ನೀಡುತ್ತದೆ ನೋಡಿ.
ವಿಟಮಿನ್ ಸಿ ಅಧಿಕವಾಗಿರುತ್ತದೆ: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿದ್ದು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ತುಂಬಾನೇ ಒಳ್ಳೆಯದಂತೆ. ಅಧ್ಯಯನವೊಂದರ ಪ್ರಕಾರ ವಿಟಮಿನ್ ಸಿ ಯ ಕಡಿಮೆ ಸೇವನೆಯನ್ನು ಹೊಂದಿರುವ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ವಿಟಮಿನ್ ಸಿ ಭರಿತ ಆಹಾರವನ್ನು ಸೇವಿಸುವ ಮಕ್ಕಳಲ್ಲಿ ಸ್ಥೂಲಕಾಯತೆಯ ಅಪಾಯವು ಕಡಿಮೆಯಾಗಿದೆ ಎಂದು ಕಂಡು ಹಿಡಿದಿದೆ.
ಕಡಿಮೆ ಕ್ಯಾಲೋರಿ: ಕಡಿಮೆ ಕ್ಯಾಲೋರಿಗಳನ್ನು ತಿನ್ನುವುದು ಮತ್ತು ದೈಹಿಕ ಚಟುವಟಿಕೆಯ ಮೂಲಕ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುವುದು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇರಿಸುವುದು ಅವಶ್ಯಕ. ನಿಂಬೆ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಮತ್ತು ಪೂರ್ಣತೆಯನ್ನು ಉತ್ತೇಜಿಸುತ್ತದೆ, ಇದು ತೂಕ ನಷ್ಟಕ್ಕೆ ಒಳ್ಳೆಯದು.
ತೂಕ ನಷ್ಟ ಆಹಾರದಲ್ಲಿ ನಿಂಬೆ ಸೇರಿಸುವುದು ಹೇಗೆ? ನಿಂಬೆ ನೀರು: ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಬೆಳಗ್ಗೆ ಒಂದು ಕಪ್ ನಿಂಬೆ ನೀರನ್ನು ಕುಡಿಯಿರಿ.
ಸ್ವಲ್ಪ ನಿಂಬೆ ರಸದೊಂದಿಗೆ ನಿಮ್ಮ ಸಲಾಡ್ಗಳಿಗೆ ಕಟುವಾದ ಪರಿಮಳವನ್ನು ಸೇರಿಸಿ. ಭಾರವಾದ ಡ್ರೆಸ್ಸಿಂಗ್ಗಳಿಂದ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ನಿಂಬೆ ರಸದಲ್ಲಿ ಮ್ಯಾರಿನೇಟ್ ಮಾಡುವ ಮೂಲಕ ಹೆಚ್ಚುವರಿ ಕ್ಯಾಲೋರಿಗಳನ್ನು ಹಾಕದೆ ಆಹಾರದ ಸುವಾಸನೆ ಹೆಚ್ಚಿಸಿ.