ರಾಯಚೂರು:- ರಾಯಚೂರಿನ ಮಲಿಯಾಬಾದ್ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಆಗಿದ್ದು, ಕ್ಯಾಮೆರಾದಲ್ಲಿ ಚಲನವಲನ ಸೆರೆಯಾಗಿದೆ.
ಕಳೆದ ಒಂದು ತಿಂಗಳಿಂದ ಚಿರತೆ ಬೆಟ್ಟದ ಗುಹೆಯಲ್ಲೇ ವಾಸಿಸುತ್ತಿದ್ದು, ಆಹಾರಕ್ಕಾಗಿ ಗ್ರಾಮದ ನಾಯಿಗಳನ್ನ ಬೇಟೆಯಾಡುತ್ತಿದೆ.
ಇಷ್ಟು ದಿನ ಚಿರತೆ ಹೆಜ್ಜೆ ಗುರುತುಗಳು ಮಾತ್ರ ಪತ್ತೆಯಾಗಿದ್ದವು. ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದೆ.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆ ಮಲಿಯಾಬಾದ್ ಹಾಗೂ ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ.