ಬೆಂಗಳೂರು ;– ಹೆಚ್ ಡಿಕೆ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ, ಅವರ ಆರೋಪ ಹಾಸ್ಯಾಸ್ಪದ ಎಂದು ಸಚಿವ ಬಿ ನಾಗೇಂದ್ರ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಮೇಲೆ ಭ್ರಷ್ಟಾಚಾರ ಆರೋಪ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ವದಂತಿ ಮಾತನ್ನು ಅವರು ಹೇಳುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರಲ್ಲ. ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಅದನ್ನು ಅವರು ಮುಂದುವರಿಸುತ್ತಿದ್ದಾರೆ. ಹೀಗೆ ಅವರು ಮುಂದುವರಿದರೆ ಲೋಕಸಭೆಯಲ್ಲಿ ಜನರು ಪಾಠ ಕಲಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟವಾದ ಆಡಳಿತ ಕೊಡುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟು ಹಾಗೂ ಕೋಚ್ ಹೆಂಡತಿ ನಡುವೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಇಬ್ಬರ ಗಲಾಟೆಯನ್ನು ಮಾಧ್ಯಮಗಳ ಮೂಲಕ ನೋಡಿದೆ. ಅವರಿಬ್ಬರೂ ನಮ್ಮ ಇಲಾಖೆ ಅಡಿಯಲ್ಲಿ ಬರುವವರಲ್ಲ. ಮಕ್ಕಳ ಕ್ರೀಡೆಗೆ ಅನುಕೂಲವಾಗಲಿ ಎಂದು ಕ್ರೀಡಾಂಗಣದಲ್ಲಿ ತರಬೇತಿ ಅವಕಾಶ ಕಲ್ಪಿಸಿದ್ದೇವೆ. ಒಬ್ಬರು ಕ್ರೀಡಾಪಟು ಮತ್ತೊಬ್ಬರು ಕೋಚ್ ಹೆಂಡತಿಯಂತೆ. ಕ್ರೀಡಾಪಟು ಹಾಗೂ ಮಕ್ಕಳ ಮುಂದೆ ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ ಎಂದರು.