ಇಸ್ಲಾಮಾಬಾದ್: 2008 ರಲ್ಲಿ ನಡೆದ ಮುಂಬೈ ಉಗ್ರ ದಾಳಿಯಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಎಲ್ಇಟಿ ಭಯೋತ್ಪಾದಕ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.
ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ವಿಶ್ವಸಂಸ್ಥೆಯಿಂದ ನಿರ್ಬಂಧ ಎದುರಿಸುತ್ತಿದ್ದ ಭಯೋತ್ಪಾದಕನಾಗಿದ್ದು, ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸಿದ್ದ ಆರೋಪದಡಿ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ.
ಪಂಜಾಬ್ ನ ಮುರಿಡ್ಕೆಯಲ್ಲಿ ಎಲ್ಇಟಿ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ ಭುಟ್ಟವಿ, ಕಾನೂನುಬಾಹಿರವಾಗಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ಗೆ ಉಪನಾಯಕರಾಗಿದ್ದ. ಜೆಯುಡಿ ಎಲ್ಇಟಿಯ ಪ್ರಮುಖ ಸಂಘಟನೆಯಾಗಿದೆ. “77 ವರ್ಷದ ಭುಟ್ಟವಿ, ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಅಕ್ಟೋಬರ್ 2019 ರಿಂದ ಲಾಹೋರ್ನಿಂದ 60 ಕಿಮೀ ದೂರದಲ್ಲಿರುವ ಜಿಲ್ಲಾ ಜೈಲು ಶೇಖುಪುರದಲ್ಲಿ ಬಂಧಿಸಲ್ಪಟ್ಟಿದ್ದು ಇದೀಗ ಬಂಧನಕ್ಕೆ ಒಳಗಾದ ನಾಲ್ಕು ವರ್ಷಗಳ ಬಳಿಕ ಪಾಕ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.