ಸರ್ಕಾರ ಉತ್ತಮ ಆಡಳಿತ ನಡೆಸಲಿ ಎಂದು ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಯೋಗ್ಯತೆ ಇಲ್ಲ ಅಂದರೆ ಎಲ್ಲರೂ ಸೇರಿ ಇದನ್ನು ಬಿಟ್ಟು ಚುನಾವಣೆಗೆ ಹೋಗುವುದು ವಾಸಿ ಎಂದು ಸಚಿವ ಕೆ.ಎನ್.ರಾಜಣ್ಣಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆ ಬಳಿಕ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡಬೇಕು.
ಈ ಬಗ್ಗೆ ಹೈಕಮಾಂಡ್ ಹೇಳಿತ್ತು ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿ.ಕೆ.ಸುರೇಶ್, ಡಿಕೆಶಿ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು. ಶಿವಕುಮಾರ್ ವರಿಷ್ಠರ ಮುಂದೆ ಎಲ್ಲವನ್ನೂ ತಿಳಿಸಿದ್ದಾರೆ. ವರಿಷ್ಠರ ಬಳಿ ನೀಡಿರುವ
ಯಾವ ಹುದ್ದೆ ಕೂಡ ಶಾಶ್ವತ ಅಲ್ಲ. ಯಾವ ನಾಯಕರು ಕೂಡಾ ಶಾಶ್ವತ ಅಲ್ಲ. ಹೇಳಿಕೆ ಕೊಡುವವರು ಕೂಡ ಹಿಂದೆ ತಿರುಗಿ ಅವರ ಬೆನ್ನು ನೋಡಿಕೊಳ್ಳಬೇಕಾಗುತ್ತದೆ. ಸರ್ಕಾರ ಉತ್ತಮ ಆಡಳಿತ ನಡೆಸಲಿ ಎಂಬ ಜವಾಬ್ದಾರಿ ಕೊಟ್ಟಿದೆ. ಅದಕ್ಕೆ ಯೋಗ್ಯತೆ ಇಲ್ಲ ಅಂದ್ರೆ ಎಲ್ಲರೂ ಸೇರಿ ಇದನ್ನ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ ಎಂದು ಸಚಿವ ರಾಜಣ್ಣ ವಿರುದ್ಧ ಹರಿಹಾಯ್ದರು.
ಯಾರೂ ಕೂಡ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಯಾರಾದ್ರೂ ಟಾರ್ಗೆಟ್ ಮಾಡ್ತೇನೆ ಅನ್ನೋದು ಇದ್ರೆ ಅದು ಅವರ ಭ್ರಮೆ. 35 ವರ್ಷಗಳ ಸುದೀರ್ಘ ರಾಜಕಾರಣ ಮೂಲಕ ರಾಜ್ಯದಲ್ಲಿ, ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ ಡಿ.ಕೆ.ಶಿವಕುಮಾರ್
ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು. ಸದ್ಯ ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಜನರ ಸೇವೆ ಮಾಡುತ್ತಿದ್ದಾರೆ. ಬೇರೆಯವರು ಅವರವರ ಅಭಿಪ್ರಾಯ ತಿಳಿಸಲು ಅರ್ಹರಿದ್ದಾರೆ. ಡಿಕೆಶಿ ಅವರನ್ನ ಟಾರ್ಗೆಟ್ ಮಾಡಿ ಲೀಡರ್ ಆಗುತ್ತೇನೆ ಎಂದರೆ ಅದು ಅವರ ಭ್ರಮೆ ಆಗತ್ತದೆ ಅಷ್ಟೇ ಎಂದು ರಾಜಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.