ಬೇಸಿಗೆ ಅಥವಾ ಚಳಿಗಾಲದಲ್ಲಿ ನಿಯಮಿತವಾಗಿ ತಲೆ ಸ್ನಾನ ಮಾಡುವುದು ಒಳ್ಳೆಯದು. ಇದು ಕೂದಲಿನ ಜಿಗುಟುತನವನ್ನು ಹೋಗಲಾಡಿಸುತ್ತದೆ ಮತ್ತು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದರೆ, ಪ್ರತಿನಿತ್ಯ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ
ಪ್ರತಿದಿನ ನಿಮ್ಮ ತಲೆಗೆ ಸ್ನಾನ ಮಾಡುವುದು ನಿಮ್ಮ ನೆತ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನೆತ್ತಿ ತುಂಬಾ ಒಣಗುತ್ತದೆ ಮತ್ತು ಕೂದಲು ಅನಾರೋಗ್ಯಕ್ಕೆ ಗುರಿಯಾಗುತ್ತವೆ..
ವ್ಯಕ್ತಿಯ ಕೂದಲಿನ ಉದ್ದ ಮತ್ತು ದಪ್ಪವನ್ನು ಅವಲಂಬಿಸಿ, ತಲೆ ಸ್ನಾನ ಮಾಡಬೇಕು. ಉದಾಹರಣೆಗೆ, ಕರ್ಲಿ ಕೂದಲು ಹೊಂದಿರುವ ವ್ಯಕ್ತಿಯು ವಾರಕ್ಕೊಮ್ಮೆ, 3-4 ದಿನಗಳಿಗೊಮ್ಮೆ, ಎಣ್ಣೆಯುಕ್ತ ಕೂದಲು ಹೊಂದಿರುವ ವ್ಯಕ್ತಿಯು ವಾರಕ್ಕೆ 2 ಅಥವಾ 3 ಬಾರಿ. ತೆಳ್ಳಗಿನ ಮತ್ತು ನೇರವಾದ ಕೂದಲನ್ನು ಹೊಂದಿರುವ ವ್ಯಕ್ತಿಯ ಕೂದಲು ಕೊಳಕಾಗಿರುವಾಗ ಮಾತ್ರ ತಲೆ ಸ್ನಾನ ಮಾಡಬೇಕು.
ತಲೆಯ ಸ್ನಾನ ಮಾಡುವಾಗ ನಿಮ್ಮ ಕೂದಲಿನ ಪ್ರಕಾರವನ್ನು ನೆನಪಿಡಿ. ಹೆಚ್ಚು ರಾಸಾಯನಿಕಗಳನ್ನು ಹೊಂದಿರದ ಶಾಂಪೂ ಬಳಸಿ. ನಿಮಗೆ ಯಾವುದೇ ಕೂದಲಿನ ಸಮಸ್ಯೆ ಇದ್ದರೆ ವೈದ್ಯರು ಶಿಫಾರಸು ಮಾಡಿದ ಶಾಂಪೂವನ್ನು ಮಾತ್ರ ಬಳಸಿ.
ಶಾಂಪೂವನ್ನು ಸ್ನಾನ ಮಾಡುವ ಮೊದಲು ನಿಮ್ಮ ಕೂದಲಿಗೆ ಹಚ್ಚುವುದು ಒಳ್ಳೆಯದು. ಕೂದಲನ್ನು ಶಾಂಪೂ ಮಾಡಿದ ನಂತರ ಕಂಡೀಷನರ್ ಅನ್ನು ಬಳಸುವುದನ್ನು ಮರೆಯಬೇಡಿ. ಏಕೆಂದರೆ
ಕಂಡಿಷನರ್ ಕೂದಲು ಒಡೆಯುವುದನ್ನು ತಡೆಯುತ್ತದೆ.
ಅತಿಯಾಗಿ ಶಾಂಪೂ ಮಾಡುವ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ. ಕೇವಲ ಒಂದು ಹನಿ ಶಾಂಪೂ ಬಳಸಿ. ಸಾಕಾಗದಿದ್ದರೆ, ಮತ್ತೆ ತೆಗೆದುಕೊಳ್ಳಿ. ನೆತ್ತಿಯ ಮೇಲೆ ಬಿಸಿ ನೀರನ್ನು ಬಳಸುವುದರಿಂದ ಕೂದಲು ಮತ್ತು ನೆತ್ತಿ ಒಣಗುತ್ತದೆ ಎಂಬುವುದು ನಿಮಗೆ ತಿಳಿದಿರಲಿ.