ಹೇಗಾದರೂ ಮಾಡಿ, ಹೆಚ್ಚಾಗಿರುವ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ, ಆರೋಗ್ಯಕರವಾದ ಆಹಾರ ಪದ್ಧತಿ, ಸರಿಯಾದ ಜೀವನಶೈಲಿ ಹಾಗೂ ಕೆಲವೊಂದು ಪೌಷ್ಟಿಕ ಸತ್ವಗಳನ್ನು ಹಣ್ಣುಗಳನ್ನು ಸೇವನೆ ಮಾಡುವುದ ರಿಂದ,ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇಂದಿನ ಲೇಖನದಲ್ಲಿ ದೇಹದ ತೂಕವನ್ನು ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ..
ಹಲಸಿನ ಹಣ್ಣು
ಹಲವಾರು ರೀತಿಯ ವಿಟಮಿನ್ಸ್ಗಳು, ಪ್ರೋಟೀನ್ ಅಂಶಗಳು ಈ ಹಣ್ಣಿನಲ್ಲಿ ಸಮೃದ್ಧ ಪ್ರಮಾಣದಲ್ಲಿ ಸಿಗುವುದರಿಂದ, ತೂಕ ಇಳಿಸುವವರಿಗೆ ಸಹಕಾರಿ.
ಸೀಬೆ ಹಣ್ಣು
ಸೀಬೆ ಹಣ್ಣಿನಲ್ಲಿ ಸಕ್ಕರೆ ಅಂಶವು ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ ಹಾಗೂ ವಿಟಮಿನ್ ಸಿ ಅಂಶ ಯಥೇಚ್ಛವಾಗಿ ಸಿಗುತ್ತದೆ. ಹಾಗಾಗಿ ತೂಕ ಇಳಿಸಲು ಪ್ರಯತ್ನಿಸುವವರಿಗೆ, ಇದೊಂದು ಒಳ್ಳೆಯ ಹಣ್ಣು ಎಂದು ಹೇಳಬಹುದು.
ಬಾಳೆಹಣ್ಣು
ಬಾಳೆಹಣ್ಣು ದೇಹದ ತೂಕ ಇಳಿಸಲು ಹಾಗೂ ಬೊಜ್ಜಿನ ಸಮಸ್ಯೆ ಯನ್ನು ನಿವಾರಣೆ ಮಾಡಲು ನೆರವಾಗುವುದು. ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಹಾಗೂ ಅಧಿಕ ಮಟ್ಟದಲ್ಲಿ ನಾರಿನಾಂಶ ಕಂಡು ಬರುತ್ತದೆ.
ಸೇಬು ಹಣ್ಣು
ಸೇಬು ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಹಾಗೂ ಒಳ್ಳೆಯ ನಾರಿನಾಂಶ ಕಂಡು ಬರುತ್ತದೆ. ಇದು ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡಿ ತೂಕ ಇಳಿಸಲು ನೆರವಾಗುತ್ತದೆ.
ಪಪ್ಪಾಯಿ ಹಣ್ಣು
ಪಪ್ಪಾಯಿ ಹಣ್ಣಿನಲ್ಲಿ ಕರಗುವ ನಾರಿನಾಂಶ ಹೆಚ್ಚಿನ ಪ್ರಮಾಣ ದಲ್ಲಿದ್ದು ಕ್ಯಾಲೋರಿಗಳು ಅತಿ ಕಡಿಮೆ ಇರುತ್ತದೆ. ಹೀಗಾಗಿ ತೂಕ ಇಳಿಸುವರಿಗೆ, ಪಪ್ಪಾಯಿ ಹಣ್ಣು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.