ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ
ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು ತಿಳಿಯೋಣ