ಬೆಂಗಳೂರು ;- ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ವಿದ್ಯುತ್ ದರವನ್ನು ಇಳಿಕೆ ಮಾಡುವಂತೆ ಆಗ್ರಹಿಸಿ ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ.
ವಿದ್ಯುತ್ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್ ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹಿನ್ನಲೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ವಿದ್ಯುತ್ ದರ ಇಳಿಸುವಂತೆ ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ವಿದ್ಯುತ್ ದರ ಹೆಚ್ಚಳ ಮುಂದಿನ ಒಂದು ವರ್ಷಕ್ಕೆ ಮುಂದೂಡಬೇಕು. ಸದ್ಯಕ್ಕೆ ಇರುವ ವಿದ್ಯುತ್ ತೆರಿಗೆಯನ್ನು 9 ಪರ್ಸೆಂಟ್ ರಿಂದ 3 ಪರ್ಸೆಂಟ್ ಇಳಿಕೆ ಮಾಡಬೇಕು. ಪ್ರಿಪೈಡ್ ಮೀಟರ್ ಅಳವಡಿಕೆ ಮಾಡಿ ಗ್ರಾಹಕರ ಠೇವಣಿ ಹಣ ಹಿಂದಿರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.