ಬೆಂಗಳೂರು: 22 ನಿವೃತ್ತ ಐಎಎಸ್ (ಅಖಿಲ ಭಾರತ ಸೇವಾ ಅಧಿಕಾರಿ)ಗಳು ಉಪರಾಷ್ಟ್ರಪತಿ ಜಗದೀಶ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ.
“ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಸೈಯದ್ ನಸೀರ್ ಹುಸೇನ್ ಅವರಿಗೆ ಸಂಸತ್ತಿನ ಪ್ರತಿಷ್ಠಿತ ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಿಸಲು ಪ್ರಮಾಣ ವಚನ ಬೋಧಿಸಬೇಡಿ” ಎಂದು ಮನವಿ ಮಾಡಿದ್ದಾರೆ
ರಾಜ್ಯಸಭಾ ಚುನಾವಣೆ ವೇಳೆ ಜಯಗಳಿಸಿ ವಿಜಯೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ವಿರೋಧಿ ಘೋಷಣೆ ಕೂಗಿರುವ ಪ್ರಕರಣ ಇತ್ಯರ್ಥವಾಗುವರೆಗೆ ಪ್ರಮಾಣ ವಚನ ಬೋಧಿಸದಂತೆ ಮನವಿ ಮಾಡಿದ್ದಾರೆ.
ಉಪ ರಾಷ್ಟ್ರಪತಿಗೆ ಪತ್ರ ಬರೆದು ಸೈಯದ್ ನಾಸಿರ್ ಹುಸೈನ್ ಗೆ ಶಾಕ್ ಕೊಟ್ಟಿದ್ದಾರೆ.