ಮುಂಗಾರು ಅಧಿವೇಶನದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ೨ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಉಪಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಶಿಫಾರಸ್ಸು ಮಾಡುವಂತೆ ಪಂಚಮಸಾಲಿ ಆಗ್ರಹ ಪತ್ರ ಚಳವಳಿ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು
ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದ ಮುಖಂಡರು ಸಿದ್ಧಾರೂಢ ಮಠದಿಂದ ಶಾಸಕರಾದ ಎಂ.ಆರ್. ಪಾಟೀಲ ಮತ್ತು ಅರವಿಂದ ಬೆಲ್ಲದ ನಿವಾಸದವರೆಗೆ ಪಾದಯಾತ್ರೆ ನಡೆಸಿ ಪತ್ರ ಚಳವಳಿ ನಡೆಸಿದರು. ನಂತರ ಶಾಸಕದ್ವಯರಿಗೆ ಮನವಿ ಪತ್ರ ಸಲ್ಲಿಸಿದರು.
‘
ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಮೂರುವರೆ ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಮುಂಗಾರು ಅಧಿವೇಶನದಲ್ಲಿ ಎಲ್ಲ ಪಕ್ಷದವರು ಪಕ್ಷಾತೀತವಾಗಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ, ಮತ್ತೆ ಪತ್ರ ಚಳವಳಿ ಆರಂಭಿಸಿದ್ದೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸರ್ಕಾರ ಬದಲಾದಾಗಲೂ ಶಾಸಕ ಅರವಿಂದ ಬೆಲ್ಲದ ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತ ಬಂದಿದ್ದಾರೆ. ಅವರ ಜೊತೆ ಅನೇಕ ಶಾಸಕರು ಸಹ ಧ್ವನಿ ಎತ್ತುತ್ತಿದ್ದಾರೆ. ಇದೀಗ ಅಧಿವೇಶನದಲ್ಲಿ ನಮ್ಮ
ಪ್ರತಿನಿಧಿಗಳು ಮೀಸಲಾತಿಗೆ ಧ್ವನಿ ಎತ್ತಬೇಕು. ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಭರವಸೆ ಸಿಕ್ಕಿತ್ತು, ಆದರೆ ಅದು ಈಡೇರಿಲ್ಲ. ಸರ್ಕಾರ ಬದಲಾಗಿದೆ. ಮತ್ತೆ ಹೋರಾಟ ನಡೆಸಬೇಕಾಗಿದೆ.
ಸಿಎಂ ಬದಲಾವಣೆ, ಸರ್ಕಾರ ಬದಲಾವಣೆ ಆಗಬಹುದು. ಆದರೆ, ನಮ್ಮ ಹೋರಾಟದ ಧ್ಯೇಯ ಮಾತ್ರ ಬದಲಾಗಿಲ್ಲ. ೧೨ ತಿಂಗಳು ಹೋರಾಟ ನಡೆಸಿದೆವು, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದೆವು. ಆದರೂ, ಸರ್ಕಾರಕ್ಕೆ ನಮ್ಮ ಕೂಗು ಕೇಳಿಸಿಲ್ಲ. ಈಗ ಶಾಸಕರೆಲ್ಲ ಸೇರಿ ಸದನದ ಬಾವಿಗೆ ಇಳಿದು ಹಕ್ಕೊತ್ತಾಯ ಮಾಡಬೇಕು’ ಎಂದು ಆಗ್ರಹಿಸಿದರು.
‘ಹುಬ್ಬಳ್ಳಿಯಲ್ಲಿ ಜುಲೈ ೧೫ ರಂದು ಕಾನೂನು ತಜ್ಞರ ಸಭೆಯನ್ನು ಕರೆಯಲಾಗಿದೆ. ಕಾನೂನಾತ್ಮಕವಾಗಿ ಮೀಸಲಾತಿ ನೀಡಲು ಸಮಸ್ಯೆ ಇದೆ ಎನ್ನುವವರಿಗೆ, ಉತ್ತರ ನೀಡಬೇಕಿದೆ. ಕಾನೂನು ಘಟಕದ ಮೂಲಕ