ಬೆಂಗಳೂರಿನಲ್ಲಿ ಐಪಿಎಲ್ ನಡೆಸದಂತೆ ಸಿಎಂಗೆ ಪತ್ರ ಬರೆದಿದ್ದು ನೀರಿನ ಕೊರತೆ, ಐಪಿಎಲ್ ನಡೆಸದಂತೆ ಹೆಚ್ಚಾಯ್ತು ಕೂಗು ಸಿಎಂ, ಜಲಮಂಡಳಿ ಅಧ್ಯಕ್ಷರಿಗೂ ಪತ್ರದ ಮೂಲಕ ಮನವಿ ಮಾಡಲಾಗಿದ್ದು ಜನರ ಹಿತಕ್ಕಿಂತ ಐಪಿಎಲ್ ಮುಖ್ಯವಲ್ಲವೆಂದು ಪತ್ರ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡರಿಂದ ಪತ್ರ.
ಐಎಪಿಎಲ್ ಗೆ ಜಲಕಂಟಕ
ಬೆಂಗಳೂರಲ್ಲಿ ಐಪಿಎಲ್ ನಡೆದರೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು
ಪಂದ್ಯದ ವೇಳೆ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತೆ
ಗ್ರೌಂಡ್ ನಿರ್ವಹಣೆಗೆ, ಶೌಚಾಲಯಕ್ಕೆ ಹೆಚ್ಚಿನ ನೀರು ಬೇಕಾಗುತ್ತೆ
ಹೀಗಾಗಿ ಜನರ ಹಿತ ದೃಷ್ಟಿಯಿಂದ ಐಎಪಿಎಲ್ ನಡೆಸದಂತೆ ಮನವಿ
ನಿಯಮದ ಉಲ್ಲಂಘನೆ’
ಕುಡಿಯುವ ನೀರನ್ನ ಕುಡಿಯಲು ಬಿಟ್ಟು ಬೇರೆ ಕೆಲಸಗಳಿಗೆ ಬಳಸುವಂತಿಲ್ಲ
ಈಗಾಗಲೇ BWSSB ಜನರಿಗೆ ಸೂಚನೆ ಕೊಟ್ಟಿದೆ
ವಾಹನ ಸ್ವಚ್ಛತೆ, ಕೈದೋಟ, ಕಟ್ಟಡ ನಿರ್ಮಾಣಕ್ಕೆ ಬಳಸುವಂತಿಲ್ಲ
ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಬಳಸುವಂತಿಲ್ಲ
ರೂಲ್ಸ್ ಬ್ರೇಕ್ ಮಾಡಿದ್ರೆ ₹5 ಸಾವಿರ ರೂಪಾಯಿ ದಂಡ ಎಂದು ಹೇಳಿದೆ
ಐಪಿಎಲ್ ಪಂದ್ಯ ನಡೆದರೆ ಈ ನಿಯಮ ಉಲ್ಲಂಘನೆ ಮಾಡಿದಂತ್ತಾಗುತ್ತೆ
ಐಪಿಎಲ್ ನಡೆಯದಿದ್ದರೆ ಲಕ್ಷಾಂತರ ಲೀಟರ್ ನೀರು ಉಳಿಯುತ್ತೆ
ಆ ನೀರನ್ನ ನೀರಿಗೆ ಹಾಹಾಕರ ಎದುರಿಸುತ್ತಿರುವ ಜನರಿಗೆ ಕೊಡಬಹದು