ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವೂ 2024ರ ಮಾರ್ಚ್ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 13,762 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ ಎಲ್ಐಸಿ 13,191 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದ ಪ್ರಮಾಣದಲ್ಲಿ 4.5% ಏರಿಕೆ ಕಂಡಿದೆ.
ಲಾಭ ಬಂದ ಹಿನ್ನೆಲೆಯಲ್ಲಿ ಒಂದು ಷೇರಿಗೆ 6 ರೂ. ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.
ಮಾರ್ಚ್ 31, 2023 ಕ್ಕೆ ಕೊನೆಗೊಂಡ ವರ್ಷದಲ್ಲಿ ವೈಯಕ್ತಿಕ ವಿಭಾಗದಲ್ಲಿ ಒಟ್ಟು 2,04,28,937 ಪಾಲಿಸಿಗಳು ಮಾರಾಟವಾದರೆ ಮಾರ್ಚ್ 31,2024ಕ್ಕೆ ಕೊನೆಗೊಂಡ ವರ್ಷದಲ್ಲಿ ಒಟ್ಟು 2,03,92,973 ಪಾಲಿಸಿಗಳನ್ನು ಮಾರಾಟ ಮಾಡಿದೆ. ಎಲ್ಐಸಿ ಷೇರು ಬೆಲೆ 7.90 ರೂ. ಏರಿಕೆಯಾಗಿ 1,037.65 ರೂ.ಗೆ ಕೊನೆಯಾಗಿದೆ. ಬೆಳಗ್ಗೆ 10:45ಕ್ಕೆ ವೇಳೆಗೆ 1,054 ರೂ.ಗೆ ಏರಿಕೆಯಾಗಿ ನಂತರ ಇಳಿಕೆಯಾಗಿತ್ತು.