ಗದಗ: ನಿರಂತರವಾಗಿ ಗದಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಅನ್ನದಾತರ ಬದುಕು ಹೇಳತೀರದಾಗಿದೆ. ಬೆಳೆ ನೀರಲ್ಲಿ ನಿಂತಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಬೆಳೆದು ನಿಂತ ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಬೆಳೆ ಕೊಳೆಯೋ ಹಂತ ತಲುಪಿದೆ.
ಇನ್ನೇನು ಹತ್ತಿ ಬಿಡಿಸಬೇಕು ಎನ್ನುವಷ್ಟರಲ್ಲಿ ನೀರಿಗೆ ತೋಯ್ದ ಹತ್ತಿ ಹಾಳಾಗಿ ನೆಲಕಚ್ಚಿದೆ.
ಗಿಡದಲ್ಲಿಯೇ ಮೊಳಕೆ ಒಡೆಯಲಾರಂಭಿಸಿದೆ. ಇದ್ರಿಂದಾಗಿ ಅನ್ನದಾತ ಆತಂಕದಲ್ಲಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ರೈತರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಡಳ್ಳಿ ಗ್ರಾಮದ ರೈತ ಹನಮಂತಪ್ಪ ಚಿಂಚಲಿ ಆಗ್ರಹಿಸಿದ್ದಾರೆ.