ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ 73, 75 ಸೇರಿದಂತೆ ಅನೇಕ ಕಡೆಗಳಲ್ಲಿ ಒಳಚರಂಡಿ, ವಿದ್ಯುತ್ ದೀಪ ಸಂಪರ್ಕ, ರಸ್ತೆ,ಕುಡಿಯುವ ನೀರು ಸರಬರಾಜು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನ ಕ್ರಾಂತಿಕ್ರಾರಿ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದು ಈ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ
ನೇಕಾರ ನಗರ ಬೇಪಾರಿ ಪ್ಲಾಟ್ , ವಾಣಿ ಪ್ಲಾಟ್, ದುರ್ಗಾ ಶಕ್ತಿ ಹಾಗೂ ಶಿವ ಶಕ್ತಿ ಕಾಲೋನಿಯಲ್ಲಿ 4.5 ಕೋ.ರೂ. ಅನುದಾನದಲ್ಲಿ ವೆಟ್ ವೆಲ್ ನಿರ್ಮಿಸಿ ಒಳಚರಂಡಿ ನೀರು ಸಾರಾಗಾವಾಗಿ ಹರಿದು ಹೋಗಲು ಮಹತ್ ಕಾರ್ಯ ಮಾಡಿದ್ದಾರೆ. ಮೊದಲೇ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಒಳಚರಂಡಿ ಹೊಂದಿದ ಪ್ರದೇಶ ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ ಖ್ಯಾತಿ ಪಡೆದಿದೆ. ಈಗ ಸಾಕಷ್ಟು ಸ್ಲಂ ಗಳನ್ನ ಹೊಂದಿದ ಕ್ಷೇತ್ರ ಸಹ ಇದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತಂದು ಇಲ್ಲಿ ಬಹಳಷ್ಟು ಶ್ರಮ ವಹಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.
ಈ ಕಾಮಗಾರಿ ಆರಂಭವಾದಲ್ಲಿ ಧಾರವಾಡ ಪ್ಲಾಟ್, ಬೇಪಾರಿ ಪ್ಲಾಟ್, ಶಿವಶಕ್ತಿ ಕಾಲನಿ, ವಾಣಿ ಪ್ಲಾಟ್, ಶಿಂಧೆ ಪ್ಲಾಟ್, ದುರ್ಗಾಶಕ್ತಿ ಕಾಲನಿ ಸೇರಿದಂತೆ ಸುತ್ತಲಿನ 06 ಕಾಲನಿಗಳ ಯುಜಿಡಿ ಸಮಸ್ಯೆಗಳಿಂದ ಸ್ಥಳೀಯ ನಿವಾಸಿಗಳು ಹೈರಾಣರಾಗಿದ್ದರು. ಇದಕ್ಕೆ ನರಕಯಾತನೆಯಿಂದ ಇಲ್ಲಿನ ಜನರ ಮುಕ್ತಿ ಮಾಡಲು ಶಾಸಕ ಅಬ್ಬಯ್ಯಾ ಪ್ರಸಾದ ಅವರ ಕಾರ್ಯಕ್ಕೆ ಶೋಭಾ ಕಮತರ, ಅಸ್ಲಂ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹಳೆ ಹುಬ್ಬಳ್ಳಿಯ ನೇಕಾರ ನಗರ, ಇಸ್ಲಾಂ ಪುರ , ಮಂಟೂರು ರಸ್ತೆ ,ಕುಲಕರ್ಣಿ ಹಕ್ಕಲ ಮುಂತಾದ ಕಡೆಗಳಲ್ಲಿ ರಸ್ತೆ ವಿದ್ಯುತ್ ದೀಪ, ಒಳಚರಂಡಿ, ರೈಲ್ವೆ ಯೋಜನೆಜಾರಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಬಡವರು ಹೆಚ್ಚಾಗಿ ಆರೋಗ್ಯ ಕ್ಷೇತ್ರಕ್ಕೆ ಸಹ ನಾನು ಹೆಚ್ಚು ಒತ್ತು ಕೊಟ್ಟಿದ್ದು ಆರೋಗ್ಯ ಕ್ಷೇತ್ರ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಲಾಗಿದೆ
ಹೊಸ ಹೊಸ ಆಸ್ಪತ್ರೆಗಳನ್ನು ಸಹ ಮಂಜೂರು ಮಾಡಿಸಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಬಾಣತಿಕಟ್ಟಾ , ಸೆಟ್ಲಮೆಂಟ್ ಗಣೇಶ ಪೇಟೆ ಆಸ್ಪತ್ರೆಗಳಿಗೆ ಅನುದಾನ ನೀಡಿ ಸುಧಾರಣೆ ಮಾಡಲಾಗಿದೆ. ಶಿಕ್ಷಣಕ್ಕೆ ಮಹತ್ವ ಕೊಡುವ ಉದ್ದೇಶದಿಂದ ಬಿಡ್ನಾಳ ಆರ್ ಕೆ ಪಾಟೀಲ ಶಾಲೆಗೆ 6 ಕೋಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಶಾಲೆಗಳಿಗೆ ಮೂಲ ಸೌಕರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗಿದೆ.
ಹುಬ್ಬಳ್ಳಿ ವಾಣಿಜ್ಯ ನಗರಿ ಇದಕ್ಕೆ ತಕ್ಕಂತೆ ವಾಣಿಜ್ಯ ವಹಿವಾಟುಗಳಿಗೆ ಅನುಕೂಲವಾಗಲೆಂದು ಜನತಾ ಬಜಾರ್ ನಲ್ಲಿ ಹೈಟೆಕ್ ಮಾರುಕಟ್ಟೆ ಮಾಡಿದ್ದೇನೆ ಫಿಶ್ ಮಾರುಕಟ್ಟೆ ಸೇರಿದಂತೆ ನಾಲ್ಕು ಮಾರುಕಟ್ಟೆಗಳನ್ನ ಅತ್ಯಾಧುನಿಕ ಮಾರುಕಟ್ಟೆಗಳನ್ನಾಗಿ ಮಾಡಿದ್ದು ಗಣೇಶಪೇಟೆಯಲ್ಲಿ 5.50 ಕೋಟಿ ಹಾಗೂ ಜನತಾ ಬಜಾರ್ 20 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದೆ.ಒಂದು ರೀತಿಯಲ್ಲಿ ಅತ್ಯಂತ ಹಿಂದುಳಿದ ಕ್ಷೇತ್ರ ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಕ್ಷೇತ್ರ ಇಂದು ಸಾಕಷ್ಟು ಅಭಿವೃದ್ಧಿಗೆ ಸಾಕ್ಷಿಯಾಗಿದೆ.