ಬೆಂಗಳೂರು: ನಾಗಸಂದ್ರ ದಿಂದ ಮಾದಾವಾರ ವರೆಗೂ ಮೆಟ್ರೋ ರೈಲು ಸಂಚಾರಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾದಾವಾರ ಮೆಟ್ರೋ ನಿಲ್ದಾಣಕ್ಕೆ ಸ್ಥಳೀಯರು ನುಗ್ಗಿದ್ದು, ಇಂದು ಡಿ.ಸಿಎಂ.ಡಿಕೆ.ಶಿವಕುಮಾರ್ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ರೈಲು ಭೂ ಸ್ವಾಧೀನ ಪಡೆದು ಅಧಿಕಾರಿಗಳು ಪರಹಾರ ನೀಡಿಲ್ಲ.
ಗ್ರಾಮದ ಅಭಿವೃದ್ಧಿಗೆ ಮೆಟ್ರೋ ಅಧಿಕಾರಿಗಳು ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆ ನೀಡದ ಹಿನ್ನೆಲೆ ಸ್ಥಳೀಯರು ಮುತ್ತಿಗೆ ಹಾಕಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.