ಬೆಂಗಳೂರು: ಸಂಸತ್ ಅಧಿವೇಶನ ನಡೆಯುತ್ತಿರುವಾಗ ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.ವಿಧಾನಸಭೆಯಲ್ಲಿ ಕೂಡ ಈ ವಿಚಾರ ಪ್ರತಿಧ್ವನಿಸಿದ್ದು, ಗದ್ದಲಕ್ಕೆ ಕಾರಣವಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಜಟಾಪಟಿಯೇ ಏರ್ಪಟ್ಟಿತ್ತು.ಸಿಎಂ ಸಿದ್ದರಾಮಯ್ಯ ಘಟನೆಗೆ ಕಳವಳ ವ್ಯಕ್ತಪಡಿಸಿದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಮಾತಿನಿಂದ ತಿವಿದಿದ್ರು. ಇದ್ರಿಂದ ಕಮಲಪಡೆ ಕೆಂಡಾಮಂಡಲವಾಯ್ತು.. ಕೆಲ ಹೊತ್ತು ಕಲಾಪವನ್ನೂ ಮುಂದೂಡಬೇಕಾಯ್ತು. ಜೊತೆಗೆ ವಿಧಾನಸಭಾ ಅಧಿವೇಶನದಲ್ಲೂ ಭದ್ರತೆ ಹೆಚ್ಚಿಸಬೇಕೆಂಬ ಆಗ್ರಹ ಕೇಳಿ ಬಂತು..
ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಭದ್ರತಾ ವೈಫಲ್ಯ ಪ್ರತಿಧ್ಚನಿಸಿತ್ತು.ಕಾನೂನು ಸಚಿವರಾದ ಎಚ್ ಕೆ ಪಾಟೀಲ್ ಲೋಕಾಸಭೆಯಲ್ಲಿ ವ್ಯಕ್ತಿಯೊಬ್ಬ ಜಿಗಿದ ಪ್ರಕರಣವನ್ನ ಸದನದಲ್ಲಿ ಪ್ರಸ್ತಾಪ ಮಾಡಿದ್ರು. ಈ ವೇಳೆ ಸ್ವೀಕರ್ ಸದನದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿದ್ರು.
ಲೋಕಸಭೆಯೊಳಗೆ ವ್ಯಕ್ತಿಯೊಬ್ಬ ಜಿಗಿದ ಪ್ರಕರಣವನ್ನು ವಿಧಾನ ಸಭೆಯಲ್ಲಿ ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಯಿತು..ವಿಷಯ ಪ್ರಸ್ತಾಪ ಆಗ್ತಿದ್ದಾಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು..ನಾನು ಈ ಘಟನೆಯನ್ನು ಖಂಡಿಸುತ್ತೇನೆ ಈ ಸದನದ ವ್ಯಾಪ್ತಿ ನಿಮಗೆ ಸೇರುತ್ತದೆ.. ಆದರೂ ನಾವು ಭದ್ರತೆಗೆ ಒತ್ತು ಕೊಡ್ತೇವೆ ಎಂದರು.
ಇನ್ನು ಸಿಎಂ ಹಾಗೂ ಗೃಹಚಿವರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ರು.ಆದ್ರೆ ಗಂಭೀರ ಚರ್ಚೆಯ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಾಪ್ ಸಿಂಹರನ್ನ ವ್ಯಂಗ್ಯವಾಗಿ ಸದನದಲ್ಲಿ ಎಳೆದು ತಂದ್ರು.ಪ್ರತಾಪ್ ಸಿಹಂ ಬಹಳ ಬುದ್ದಿವಂತ.. ಪಾಪ ಪಾಸ್ ಅವರು ಕೊಟ್ಟುಬಿಟ್ಟಿದ್ದಾರೆ.. ಆಗ ಅವರು ಜಂಪ್ ಮಾಡಿ ಅಲ್ಲಿ ಹಾಕಿದ್ದಾರೆ.ಈ ಪ್ರಕರಣವನ್ ಪ್ರತಿಪಕ್ಷ ಬಿಜೆಪಿಯವರೇ ಹೊರಬೇಕೆಂದ್ರು.ಡಿಕೆಶಿ ಹೇಳುತ್ತಿದ್ದಂತೆ ಸದನದಲ್ಲಿ ದೊಡ್ಡ ಗದ್ದಲ ಸದ್ದಲ ಉಂಟಾಯಿತು.. ಡಿಕೆ ವಿರುದ್ದ ಬಿಜೆಪಿ ನಾಯಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.. ಡಿಕೆ ಶಿವಕುಮಾರ್ ಇದನ್ನ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ ಎಂದು ಅರ್ ಅಶೋಕ್ ಅಕ್ರೋಶ ವ್ಯಕ್ತಪಡಿಸಿದ್ರು.ಒಂದೇ ವೇಳೆ ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟದ್ರೆ ಏನೇನು ಹೇಳ್ತಿದ್ರೂ ಅಂತ ಪ್ರಿಯಾಂಕ್ ಖರ್ಗೆ ,ಬಿಜೆಪಿ ನಾಯಕರ ಕಾಲೆಳೆದ್ರು.
ಇನ್ನು ಡಿಕೆಯ ಮಾತಿನಿಂದ ಅಕ್ರೋಶಗೊಂಡ ಬಿಜೆಪಿ ನಾಯಕರು ಇದನ್ನ ರಾಜಕೀಯ ಮಾಡಲು ಹೊರಟ್ಟಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು.. ಈ ವೇಳೆ ಎರಡು ಪಕ್ಷದ ಶಾಸಕರಿಂದ ಮಾತಿನ ಚಕಮಕಿ ನಡೆದು ಸದನವನ್ನ ೧೦ ನಿಮಿಷ ಮುಂದೂಡಲಾಯಿತು.. ಈ ವೇಳೆ ಖುದ್ದು ಸಿಎಂ ವಿಪಕ್ಷ ನಾಯಕರನ್ನ ಕರೆದು ಮಾತನಾಡಿ ಮತ್ತೆ ಸದನವನ್ನ ಆರಂಭಿಸಲಾಯಿತು. ಈ ವೇಳೆ ಸದನ ಆರಂಬಿಸುತ್ತಿದ್ದಂತೆ ಬಿಜೆಪಿ ನಾಯಕರನ್ನ ಮತ್ತೆ ಗುರಿಯಾಗಿಸಿ ಮಾತನಾಡಲು ನಯಾನಮೊಟ್ಟಮ್ಮ ಮುಂದಾದಗ ಸ್ವೀಕರ್ ಗರಂ ಅದ್ರು.
ನೀವು ಮಾತಾಡಿ ಯಾರನ್ನೂ ಮೆಚ್ಚಿಸುವ ಅಗತ್ಯ ಇಲ್ಲ.. ಸಮಯ ವ್ಯರ್ಥ ಮಾಡಬೇಡಿ, ಇನ್ನು ಮೂರು ದಿನ ಮಾತ್ರ ಕಲಾಪ ಇರೋದು ಎಂದು ಗರಂ ಅದ್ರು ಜೊತೆಗೆ ಸಂಸತ್ ಸ್ಮೋಕ್ ದಾಳಿಯನ್ನು ನಾವೆಲ್ಲ ತೀವ್ರವಾಗಿ ಖಂಡಿಸ್ತೇವೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಕೇಂದ್ರಕ್ಕೆ ನಾವು ಆಗ್ರಹಿಸ್ತೇವೆ..ಇಲ್ಲಿನ ಕಲಾಪದಲ್ಲಿ ಯಾರಾದರೂ ಅಸಂಸದೀಯವಾಗಿ ಮಾತಾಡಿದ್ರೆ ಕಡತದಿಂದ ತೆಗೆಸ್ತೇವೆ. ಶಾಸಕರು ಪಾಸ್ ಕೊಡುವ ಮುನ್ನ ಎಚ್ಚರ ಎಂದು ಸ್ವೀಕರ್ ಬುದ್ದಿವಾದ ಹೇಳಿದ್ರು.
ಒಟ್ಟಾರೆ, ಲೋಕಾಸಭಾ ಭದ್ರತಾ ಲೋಪ ರಾಜ್ಯ ವಿಧಾನ ಸಭೆಯಲ್ಲಿ ಸಲ್ಪ ಮಟ್ಟಿಗೆ ಬಿಸಿಮುಟ್ಟಿಸಿತ್ತು..ಇದಲ್ಲದೆ ಗೃಹ ಸಚಿವರ ಸೂಚನೆ ಮೆರೆಗೆ ಇಡೀ ಸುವರ್ಣ ಸೌಧವನ್ನು ಪೊಲೀಸರು ಪರಿಶೀಲನೆ ನಡೆಸಿದ್ರು..
ಆದ್ರೆ ಭದ್ರತಾ ಲೋಪದಂತಹ ವಿಚಾರದಲ್ಲೂ ರಾಜಕೀಯ ನಾಯಕರು ಕಿತ್ತಾಡಿಕೊಂಡಿದ್ದು ಮಾತ್ರ ವಿಪರ್ಯಾಸ.