ಬೆಂಗಳೂರು: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ರಾಜ್ಯದ 17 ಭ್ರಷ್ಟರಿಗೆ ಲೋಕಾಯುಕ್ತ ಬಿಸಿ ಮುಟ್ಟಿದೆ. ಬೆಂಗಳೂರಿನಲ್ಲೂ 2 ಕಡೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ.
ಭ್ರಷ್ಟ ಅಧಿಕಾರಿಗಳ ಮೇಲೆ ಮನೆ ಮೇಲೆ ಲೋಕಾಯಕ್ತ ಟೀಂ ಇಂದು ಕೂಡ ಬಿಗ್ ರೇಡ್ ನಡೆಸಿದೆ. ರಾಜ್ಯಾದ್ಯಂತ ಇಂದು ಬೆಳಿಗ್ಗೆ ಏಕಕಾಲದಲ್ಲಿ 17 ಅಧಿಕಾರಿಗಳಿಗೆ ಸಂಬಂಧಿಸಿದ 75ಕ್ಕೂ ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ, ರಾಯಚೂರು, ದಾವಣಗೆರೆ, ಮಂಡ್ಯ ಸೇರಿದಂತೆ ಬೆಂಗಳೂರಿನಲ್ಲೂ 2 ಕಡೆ ಲೋಕಾಯುಕ್ತ ಟೀಂ ರೇಡ್ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ರಾಜ್ಯದಲ್ಲಿ ನಡೆದ ಲೋಕಾಯುಕ್ತ ರೇಡ್ ನಲ್ಲಿ ಸಿಕ್ಕಿ ಬಿದ ಭ್ರಷ್ಟ ಅಧಿಕಾರಿಗಳ ವಿವರ ಇಲ್ಲಿದೆ ನೋಡಿ.
01. ತಿಪ್ಪಣ್ಣಗೌಡ, EE, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ದೇವದುರ್ಗ
02, ಬಸವರಾಜ, ವಲಯ ಅರಣ್ಯಾಧಿಕಾರಿ, ಬೀದರ್
03. ಮಹಾಂತೇಶ, ವಲಯ ಅರಣ್ಯಾಧಿಕಾರಿ, ಹಾವೇರಿ
04. ಪರಮೇಶಪ್ಪ, ವಲಯ ಅರಣ್ಯಾಧಿಕಾರಿ, ಹಾವೇರಿ.
05. ಎಂ.ಪಿ. ನಾಗೇಂದ್ರ ನಾಯ್ಕ್, ACF, ಚಿತ್ರದುರ್ಗ
06. ಬಾಲರಾಜು N.P, ಮುಖ್ಯ ಇಂಜಿನಿಯರ್, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು.
07 ಕೆ.ಮಂಜುನಾಥ್, ಕಂದಾಯ ನಿರೀಕ್ಷಕರು, ಬಳ್ಳಾರಿ
08. ಶರಣಬಸಪ್ಪ ಪಟ್ಟೇಡ್, ನಿರ್ದೇಶಕರು, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ರಾಯಚೂರು
09. ಎಂ. ನಾಗೇಂದ್ರಪ್ಪ, AE, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಿರಾ
10. ವಿ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ
11. ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ, ಜಂಟಿ ನಿರ್ದೇಶಕರು, ನಗರ ಯೋಜನೆ, ಗುಲ್ಬರ್ಗ
12. ಚಂದ್ರಪ್ಪ ಕೆ.ವಿ, ARO, ಹೆಗ್ಗನಹಳ್ಳಿ, BBMP, ಬೆಂಗಳೂರು
13 ಹೆಚ್.ರಾಜೇಶ್, ಬೇಲೇಕೇರಿ. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ. ಉಡುಪಿ
14. ನಾರಾಯಣ ಹೆಚ್ ಇ, ಜೂನಿಯರ್ ಇಂಜಿನಿಯರ್, KPTCL, ಗೊರೂರು
15. ಮಹಾದೇವ ಬೀರದಾರ ಪಾಟೀಲ್, ಎಇಇ, ಪಂಚಾಯತ್ ರಾಜ್ ಉಪವಿಭಾಗ, ಬೆಳಗಾವಿ
16. ಶಶಿಕುಮಾರ್ ಟಿ ಎಂ, EE, ಟೌನ್ ಪ್ಲಾನಿಂಗ್, ಪ್ರಸ್ತುತ KIADB ಬೆಂಗಳೂರು
17. ಶ್ರೀನಿವಾಸ್ ಎಸ್.ಆರ್, ಉಪ ನಿರ್ದೇಶಕರು ಬಾಯ್ಲರ್, ದಾವಣಗೆರೆ.
ಬೆಂಗಳೂರಿನಲ್ಲೂ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಕಾರ್ಮಿಕ ಇಲಾಖೆ ಉಪ ನಿರ್ದೇಶಕರಾಗಿರೊ ಶ್ರೀನಿವಾಸ್ ಬೆಂಗಳೂರಿನಲ್ಲಿ ವಾಸವಿದ್ದ ಉಳ್ಳಾಲದಲ್ಲಿ ಬೃಹತ್ ಬಂಗಲೆ ಮೇಲೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶ್ರೀನಿವಾಸ್ ಮನೆಯಲ್ಲಿ 8 ಲಕ್ಷ ರೂ. ಕ್ಯಾಶ್, 200 ಗ್ರಾಂ ಚಿನ್ನಾಭರಣ ದೊರೆತಿದೆ. ಅಷ್ಟಲ್ಲದೇ ಶ್ರೀನಿವಾಸ್ಗೆ ಸಂಬಂಧಿಸಿದ ವಿವಿಧ ನಿವೇಶಗಳ ದಾಖಲೆಗಳು, 2 ಕಾರ್, 2 ಬೈಕ್ಗಳು ಪತ್ತೆಯಾಗಿವೆ.
ಇನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಬಿಬಿಎಂಪಿಯ ಹೆಗ್ಗನಹಳ್ಳಿ ವಾರ್ಡ್ನ ARO ಚಂದ್ರಪ್ಪ ಲೋಕಾಯಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಸೇರಿದ್ರು. ಅದರ ಮುಂದುವರಿದ ಭಾಗವಾಗಿ ಇಂದು ಕೆ.ಆರ್.ಪುರಂನಲ್ಲಿರೋ ARO ಚಂದ್ರಪ್ಪ ಮನೆ ಮೇಲೆ ದಾಳಿ ನಡೆಸಿರೋ ಲೋಕಾಯಕ್ತ ಅಧಿಕಾರಿಗಳು, ಸಾಕಷ್ಟು ಪ್ರಮಾಣದ ಹಣ ಮತ್ತು ಆಸ್ತಿ ಪಾಸ್ತಿಗಳನ್ನ ಪತ್ತೆ ಮಾಡಿದ್ದಾರೆ.
ಹೀಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ದಾಳಿ ನಡೆಸಿರೋ ಲೋಕಾಯಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಸದ್ಯ ಅಕ್ರಮ ಆಸ್ತಿ ಮಾಡಿರೋ ಅಧಿಕಾರಿಗಳ ವಿರುದ್ಧ ಲೋಕಾಯಕ್ತ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.