ಬೆಂಗಳೂರು: ರಾಮನಗರದ ಅರಳಿಕರೆದೊಡ್ಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿಯಿಂದ ಮೃತಪಟ್ಟಿರುವ ತಿಮ್ಮಪ್ಪ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ, ಅವರ ಮಗಳಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಿಂದ ಭಾನುವಾರ ದೂರವಾಣಿ ಮೂಲಕ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿಎಂ ಅವರು, “ಗ್ರಾಮಸ್ಥರ ಬೇಡಿಕೆಯಂತೆ ಅಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಿ” ಎಂದು ತಿಳಿಸಿದರು.
ಅರಳಿಕರೆ ದೊಡ್ಡಿ ಗ್ರಾಮದ ತಿಮ್ಮಪ್ಪ (60) ಅವರು ಇಂದು ಮುಂಜಾನೆ ನಾಯಿಗಳು ಬೊಗಳುತ್ತಿದ್ದ ಶಬ್ದ ಕೇಳಿ ತೋಟದ ಮನೆ ಬಳಿ ಹೋದಾಗ ಒಂಟಿ ಕಾಡಾನೆ ದಾಳಿಗೆ ಸಿಕ್ಕಿ ಬಲಿಯಾಗಿದ್ದಾರೆ.