ಬೆಂಗಳೂರು ;– ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ವಿರುದ್ಧ ಕರ್ನಾಟಕ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ತಿರುಗಿ ಬಿದ್ದಿದೆ.
ಕರ್ನಾಟಕ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಜುಲೈ 27ರಂದು ಬಂದ್ಗೆ ಕರೆ ಕೊಟ್ಟಿದ್ರು. ಇದ್ರ ಬೆನ್ನಲ್ಲೇ ಅಲರ್ಟ್ ಆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜುಲೈ 24ರಂದು ಒಂದೇ ದಿನ 2 ಸುತ್ತಿನ ಸಭೆ ನಡೆಸಿ ಕೆಲವು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದ್ರು.
ಸಾರಿಗೆ ಸಚಿವರ ಭರವಸೆಯ ಮೇರೆಗೆ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರ ವಾಪಸ್ ಪಡೆದಿದ್ರು. ಜೊತೆಗೆ ಇಂದು ಇನ್ನೊಂದು ಸುತ್ತಿನ ಸಭೆ ನಡೆಸೋದಾಗಿ ಹೇಳಿದ್ರು. ಅಲ್ಲದೇ ಆಗಸ್ಟ್ ಮೊದಲನೇ ವಾರದಲ್ಲಿ ಸಿಎಂ ಜೊತೆ ಭೇಟಿ ಮಾಡಿಸೋದಾಗಿಯೂ ಭರವಸೆ ನೀಡಿದ್ರು. ಇಂದಿನ ಸಭೆಯಲ್ಲಿ ಸಾರಿಗೆ ಸಚಿವರು ಎಲ್ಲ ಸಂಘಟನೆಗಳನ್ನ ಬೇರೆ ಬೇರೆಯಾಗಿ ಕರೆದು ಮಾತುಕತೆ ನಡೆಸಲಿದ್ದಾರೆ. ಒಂದು ಸಂಘಟನೆಯಿಂದ ಇಬ್ಬರಿಗೆ ಮಾತ್ರ ಸಭೆಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಆಟೋ ಅಸೋಸಿಯೇಷನ್, 12 ರಿಂದ 1 ಗಂಟೆಯವರೆಗೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್, ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಖಾಸಗಿ ಬಸ್ ಅಸೋಸಿಯೇಷನ್ ಜೊತೆಗೆ ಸಭೆ ನಡೆಸಲಿದ್ದಾರೆ.