ಗದಗ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ಆರ್ಥಿಕ ನಷ್ಟವಾಗಿದ್ದು, ತೀವ್ರ ಕಂಗಾಲಾಗಿದ್ದಾರೆ.
ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ ನೂರಾರು ಎಕರೆ ಈರುಳ್ಳಿ ಬೆಳೆ ಹಾನಿಯಾಗಿದ್ದು,
ಅತಿಯಾದ ಮಳೆಯಿಂದ ಜಮೀನಿನಲ್ಲೇ ಈರುಳ್ಳಿ ಕೊಳೆತು ಹಾಳಾಗಿದೆ. ಷ್ಟಪಟ್ಟು ಬೆಳೆದ ಈರುಳ್ಳಿ ಹಾಳಾಗಿದ್ದು ನೋಡಿ ಅಜ್ಜಿ ದೇವಮ್ಮ ಹಳ್ಳಿ ಗೋಳಾಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಟಾವು ಮಾಡಿದ ಈರುಳ್ಳಿ ಸಂಪೂರ್ಣ ಹಾಳಾಗಿದೆ. 4-5 ಚೀಲ ಆಗೋದು ಕಷ್ಟ ಇದೆ ಎಂದು ಅಜ್ಜಿ ದೇವಮ್ಮ ಕಣ್ಣೀರಿಟ್ಟಿದ್ದಾರೆ. ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಇಲ್ಲ ಅಂದರೆ ಸಾವೇ ಗತಿ ಎಂದು ಪರಿಹಾರಕ್ಕೆ ಅಜ್ಜಿ ಆಗ್ರಹಿಸಿದ್ದಾರೆ.