ಕಳೆದ ಕೆಲವು ದಿನಗಳಿಂದ ನಟಿ ನಯನತಾರಾ ಹಾಗೂ ವಿಘ್ನೇಶ್ ವಿವೋರ್ಸ್ ಸುದ್ದಿ ಜೋರಾಗಿಯೇ ಕೇಳಿ ಬರ್ತಿದೆ. ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಜೊತೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ನಯನತಾರಾ ಅವರು ಪತಿ ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದೇ ಇದಕ್ಕೆ ಕಾರಣ ಆಗಿತ್ತು. ಬಳಿಕ ಮರಳಿ ಅವರು ವಿಘ್ನೇಶ್ ಅವರನ್ನ ಫಾಲೋ ಮಾಡೋಕೆ ಆರಂಭಿಸಿದರು. ಈ ಮಧ್ಯೆ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಹಾಕಿದ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ನಯನತಾರಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ‘ಹೌದು, ಕಳೆದು ಹೋಗಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದು ವಿಘ್ನೇಶ್ ಹಾಗೂ ನಯನತಾರಾ ಮಧ್ಯೆ ಎಲ್ಲವು ಸರಿ ಎನ್ನುವುದನ್ನು ಚರ್ಚಿಸುವಂತೆ ಮಾಡಿದೆ.
ನಯನತಾರಾ ಅವರು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ನಯನತಾರಾ ಹಾಗೂ ವಿಘ್ನೇಶ್ ಒಟ್ಟಿಗೆ ಇರುವ ವಿಡಿಯೋ ಇದಾಗಿತ್ತು. ಕೊಳಲು ವಾದಕರೊಬ್ಬರು ಹಂಚಿಕೊಂಡಿದ್ದ ವಿಡಿಯೋನ ನಯನತಾರಾ ಶೇರ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರ ಮಧ್ಯೆ ಎಲ್ಲವೂ ಸರಿ ಇದೆ ಎಂದು ಹೇಳಲಾಗಿತ್ತು. ಈ ಮಧ್ಯೆ ನಯನತಾರಾ ಹಾಕಿರುವ ಈ ಪೋಸ್ಟ್ ಮತ್ತೆ ಚರ್ಚೆಗೆ ಕಾರಣವಾಗಿದೆ.