ತಿರುವನಂತಪುರಂ: ವರನಿಗೆ ವಧುವಿನ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು.
ಬಂಧಿತನನ್ನು ವಿಜಿನ್ (22) ಎಂದು ಗುರುತಿಸಲಾಗಿದೆ. ಕಡುಕ್ಕಮೂಡುವಿನ ವೆಲ್ಲನಾಡು ನಿವಾಸಿಯಾಗಿರುವ ಈತ ಇದೀಗ ಕೇರಳ ಪೊಲೀಸ (Kerala Police) ರ ಅತಿಥಿಯಾಗಿದ್ದಾನೆ.
ವಿಜಿನ್ ಹಾಗೂ ವಧು ಸುಮಾರು 4 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತ ಹುಡುಗಿಯ ಕುಟುಂಬಸ್ಥರು ಆಕೆಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಮಾಜಿ ಪ್ರಿಯತಮ ವಿಜಿನ್, ಆಕೆಯ ಜೊತೆಗಿದ್ದ ಅಶ್ಲೀಲ ಫೋಟೋಗಳನ್ನು ವಾಟ್ಸಾಪ್ ಮೂಲಕ ವರನಿಗೆ ರವಾನಿಸಿದ್ದಾನೆ.
ಇಷ್ಟು ಮಾತ್ರವಲ್ಲದೆ ವರನ ಮನೆಗೆ ತೆರಳಿ ಆತನ ಪೋಷಕರಿಗೆ ಕೂಡ ತೋರಿಸಿದ್ದಾನೆ. ವಧುವಿನ ಫೋಟೋ (Bride Photos) ಗಳನ್ನು ನೋಡಿದ ವರನ ಕಡೆಯವರು ಅಂದೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.
ಇತ್ತ ಪ್ರಕರಣ ಸಂಬಂಧ ವಿಜಿನ್ ನನ್ನು ಬಂಧಿಸಿ, ಆತನ ಮೇಲೆ ಕೆಸ್ ದಾಖಲಿಸಲಾಗಿದೆ. ಮದುವೆ ತಪ್ಪಿಸಲೆಂದೇ ಈ ಕೃತ್ಯ ಎಸಗಿರುವುದಾಗಿ ವಿಜಿನ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.