ಹೊಸ ಮನೆಗೆ ಕಾಲಿಟ್ಟ ಲವ್ ಮಾಕ್ಟೇಲ್ ಜೋಡಿ: ಇಲ್ಲಿದೆ ಗೃಹ ಪ್ರವೇಶದ ಬ್ಯೂಟಿಫುಲ್ ಫೋಟೋಸ್

ಫೋಟೋ ಗ್ಯಾಲರಿ

ಲವ್ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೊಸ ಮನೆಗೆ ಕಾಲಿಟ್ಟಿದ್ದು, ಗೃಹ ಪ್ರವೇಶದ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿಗಳು ಸದ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.

2020ರಲ್ಲಿ ತೆರೆಕಂಡ ಲವ್ ಮಾಕ್ಟೇಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಜೋಡಿಗಳು.

ಕೃಷ್ಣ ಮತ್ತು ಮಿಲನಾ ಜೋಡಿಯನ್ನು ಅಭಿಮಾನಿಗಳು ಕ್ರಿಸ್​ಮಿ ಎಂದು ಕರೆಯುತ್ತಾರೆ. ಹೊಸ ಮನೆಗೆ ‘ಕ್ರಿಸ್​ಮಿ ನೆಸ್ಟ್​’ ಎಂದು ಹೆಸರಿಡಲಾಗಿದೆ.

ಚಿತ್ರರಂಗದಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೊಸ ಮನೆಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಈ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.