ನವದೆಹಲಿ : ಮಾದಕ ದ್ರವ್ಯಗಳನ್ನು ಸೇವಿಸಿ, ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಮತ್ತು ತನ್ನ ಕಾಮತೃಷೆ ತೀರಿಸಿಕೊಳ್ಳಲು ಹಲವಾರು ಕಿಲೋಮೀಟರ್ಗಳಷ್ಟು ದೂರ ಹೋಗಿ ಅತ್ಯಾಚಾರ ಮಾಡುತ್ತಿದ್ದ ಕಾಮಪಿಶಾಚಿಗೆ ಇತ್ತೀಚೆಗೆ ಕೊನೆಗೂ ಶಿಕ್ಷೆಯಾಗಿದೆ. ದೆಹಲಿ ಕೋರ್ಟ್ ಇತ್ತೀಚೆಗೆ ಶಿಕ್ಷೆ ನೀಡಿದೆ. ಬಂಧನಕ್ಕೂ ಮುನ್ನ ದೆಹಲಿಯ ಕರಾಲಾದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರವೀಂದರ್ ಕುಮಾರ್ 2008 ಮತ್ತು 2015 ರ ನಡುವೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆ ಮಕ್ಕಳ ಹೆತ್ತವರು ಬಹುತೇಕ ಕಾರ್ಮಿಕರಾಗಿದ್ದು, ಅವರು ಮಲಗಲು ಹೋದಾಗ ಕತ್ತಲೆಯಲ್ಲಿ ಹಣ ಅಥವಾ ಸಿಹಿ ತಿಂಡಿಯೊಂದಿಗೆ ಮಕ್ಕಳನ್ನು ಆಕರ್ಷಿಸುತ್ತಿದ್ದ. ಹಾಗೆ, ಪ್ರತ್ಯೇಕ ಸ್ಥಳದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ಮಾಡ್ತಿದ್ದ ಮತ್ತು ಸಿಕ್ಕಿಬೀಳುವ ಭಯದಿಂದ ಹೆಚ್ಚಿನವರನ್ನು ಕೊಲ್ಲುತ್ತಿದ್ದ ಎಂದು ವರದಿಯಾಗಿದೆ. ಸದ್ಯ, ಒಂದು ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಎರಡು ವಾರಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
2015ರಲ್ಲಿ 6 ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ ಕುಮಾರ್ನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆಯ ಸಮಯದಲ್ಲಿ, ದೆಹಲಿಯ ಬೇಗಂಪುರ ಪ್ರದೇಶದಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಪೊಲೀಸರು ರಕ್ಷಿಸಿದ್ದರು. ಇನ್ನು, 32 ವರ್ಷದ ಆರೋಪಿ ತನ್ನ ಹಲವಾರು ಅಪರಾಧಗಳನ್ನು ಒಪ್ಪಿಕೊಂಡಿದ್ದು ಮತ್ತು ಆತ ಲೈಂಗಿಕ ದೌರ್ಜನ್ಯ ನಡೆಸಿದ ಸ್ಥಳಗಳಿಗೆ ಪೊಲೀಸರನ್ನು ಕರೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.
ಬೇಗಂಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದ ನಿವೃತ್ತ ಎಸಿಪಿ ಜಗಮಿಂದರ್ ಸಿಂಗ್ ದಹಿಯಾ ಅವರು 2015 ರಲ್ಲಿ ಕುಮಾರ್ನನ್ನು ಬಂಧಿಸಿದ್ದರು. ಲೈಂಗಿಕ ದೌರ್ಜನ್ಯದ ಮೊದಲು ಹೆಚ್ಚು ಪ್ರತಿರೋಧ ತೋರುತ್ತಿದ್ದ ಹುಡುಗಿಯರನ್ನು ಸರಣಿ ಅಪರಾಧಿ ಕೊಂದಿದ್ದಾನೆ ಎಂದು ಜಗಮಿಂದರ್ ಸಿಂಗ್ ದಹಿಯಾ ತಿಳಿಸಿದ್ದಾರೆ. ಅಲ್ಲದೆ, ಆತ ಅತ್ಯಾಚಾರ ಮಾಡುತ್ತಿದ್ದ ವಿಧಾನಗಳನ್ನು ವಿವರಿಸಿದ ಜಗಮಿಂದರ್ ಸಿಂಗ್ ದಹಿಯಾ, ಕುಮಾರ್ ತನ್ನ ಗುರಿಗಾಗಿ ಸೂರ್ಯಾಸ್ತದ ನಂತರ ನಿರ್ಮಾಣವಾಗುತ್ತಿದ್ದ ಕಟ್ಟಡಗಳಿಗೆ ಭೇಟಿ ನೀಡುತ್ತಿದ್ದ. ಹಾಗೂ, ಗುಡಿಸಲುಗಳಿಂದ ಮಕ್ಕಳನ್ನು ಅಪಹರಿಸಿ, ಖಾಲಿ ಇರುವ ಕಟ್ಟಡಗಳು ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಮಾಡುತ್ತಿದ್ದ ಎಂದು ನಿವೃತ್ತ ಎಸಿಪಿ ಹೇಳಿದರು.
ಅಲ್ಲದೆ, ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಿದ ನಂತರ, ಕುಮಾರ್ಗೆ ತನ್ನ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದುತ್ತಿರಲಿಲ್ಲ ಮತ್ತು ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಸೂರ್ಯಾಸ್ತದ ನಂತರ ಮಕ್ಕಳನ್ನು ಹುಡುಕುತ್ತಿದ್ದ” ಎಂದೂ ಜಗಮಿಂದರ್ ಸಿಂಗ್ ದಹಿಯಾ ಹೇಳಿದ್ದಾರೆ. ಬಲಿಪಶುಗಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಾಗಿರುವುದರಿಂದ, ಕುಮಾರ್ ಇಷ್ಟು ದಿನ ಪೊಲೀಸರ ಕಣ್ಣಿಗೆ ಬಿದ್ದಿರಲಿಲ್ಲ ಎಂದೂ ತಿಳಿದುಬಂದಿದೆ. ಇಂತಹ ನೀಚ ಆರೋಪಿಗೆ ಕೋರ್ಟ್ ಯಾವ ರೀತಿ ಶಿಕ್ಷೆ ನೀಡುತ್ತದೋ ಕಾಯ್ದು ನೋಡಬೇಕಾಗಿದೆ.