ಬೆಂಗಳೂರು:- ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳಿಂದ ಮೆಟ್ರೋ ಹಳದಿ ಮಾರ್ಗ ತಪಾಸಣೆ ನಡೆದಿದೆ. ಕೇಂದ್ರ ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಧಿಕಾರಿಗಳಿಂದ ಆಸಿಲೇಷನ್ ಮತ್ತು ಇಬಿಡಿ ಟೆಸ್ಟಿಂಗ್ ಮಾಡಲಾಗುತ್ತಿದೆ.
ಅಂದರೆ ಈ ರೈಲಿನಲ್ಲಿ ಎಷ್ಟು ಪ್ರಯಾಣಿಕರು ಸಂಚಾರ ಮಾಡಬಹುದು, ಎಷ್ಟು ವೇಗದಲ್ಲಿ ಈ ರೈಲು ಸಂಚಾರ ಮಾಡುತ್ತದೆ, ಸಿಗ್ನಲ್ ಟೆಸ್ಟ್, ಬ್ರೇಕ್ ಕ್ಯಾಪಾಸಿಟಿ ಟೆಸ್ಟ್ ಹೀಗೆ ನಾನಾ ರೀತಿಯಲ್ಲಿ ಚೀನಾದ ಡ್ರೈವರ್ಲೆಸ್ ರೈಲಿನ ಪರಿಶೀಲನೆ ಮಾಡಲಾಗುತ್ತಿದೆ.
ಹಳದಿ ಮೆಟ್ರೋ ರೈಲು ಮಾರ್ಗದ ವಿಶೇಷತೆಗಳು
ಚಾಲಕ ರಹಿತ ಮೆಟ್ರೋ ಮಾರ್ಗವು 19.15 ಕಿಮೀ ಹೊಂದಿದೆ
ಆರ್ ರಸ್ತೆ – ಬೊಮ್ಮಸಂದ್ರದ ನಡುವೆ ಕನೆಕ್ಟ್ ಮಾಡಲಿದೆ
ಇದು ಒಟ್ಟು ಬರೋಬ್ಬರಿ 16 ನಿಲ್ದಾಣಗಳನ್ನ ಹೊಂದಿದೆ
ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ
ಬೋಗಿಗಳಲ್ಲಿ 24 ಸಿಸಿ ಟಿವಿ ಇದ್ರೆ, ಮುಂಭಾಗದಲ್ಲಿ 2 ಸಿಸಿಟಿವಿ ಇರಲಿದೆ. ಪ್ರಯಾಣದ ದೃಶ್ಯವನ್ನ ಸೆರೆ ಹಿಡಿಯಲಿದೆ.
ಇನ್ನೂ ನಿನ್ನೆಯಿಂದ 12 ರಿಂದ 15 ದಿನಗಳ ವರೆಗೆ ಈ ಪರೀಕ್ಷೆಗಳು ನಡೆಯಲಿದೆ. 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗ ಹದಿನಾರು ಮೆಟ್ರೋ ಸ್ಟೇಷನ್ ಗಳು ಬರಲಿದ್ದು,ಈಗಾಗಲೇ ಹಳದಿ ಮಾರ್ಗದಲ್ಲಿ ಟ್ರಯಲ್ ಕಾರ್ಯ ಪೂರ್ಣಗೊಂಡಿದೆ. ಚೀನಾದ ಡ್ರೈವರ್ಲೆಸ್ ರೈಲುಗಳಿಂದ ಟ್ರ್ಯಾಕ್ ಮೇಲೆ ಟ್ರಯಲ್ ರನ್ ನಡೆಸುತ್ತಿದ್ದಾರೆ. ಆರ್ಡಿಎಸ್ಓ ಅಧಿಕಾರಿಗಳ ಟೆಸ್ಟಿಂಗ್ ರಿಪೋರ್ಟ್ ಸಲ್ಲಿಸಿದ ನಂತರ ಕೇಂದ್ರದ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಳದಿ ಮಾರ್ಗದ ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ.