ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ(V. Somanna) ವಿರುದ್ದ ರಾಜ್ಯ ಚುನಾವಣಾ ಆಯೋಗಕ್ಕೆ ವಂದೇ ಮಾತರಂ ಸಮಾಜಸೇವಾ ಸಂಘಟನೆ ಅಧ್ಯಕ್ಷ ಸಿಎಂ ಶಿವಕುಮಾರ್(CM Sivakumar) ನಾಯಕ್ ಅವರು ದೂರು ನೀಡಿದ್ದಾರೆ. ಚಾಮರಾಜ ನಗರ ಜೆಡಿಎಸ್ ಅಭ್ಯರ್ಥಿಗೆ(JDS candidate from Chamarajanagar) ಆಮಿಷವೊಡ್ಡಿದ್ದ ಆರೋಪ ಹಿನ್ನಲೆ ದೂರು ದಾಖಲಿಸಿದ್ದಾರೆ. ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಆಲೂರು ಮಂಜುನಾಥ್ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸಚಿವರು 50ಲಕ್ಷ ಹಣದ ಆಮಿಷ ಒಡ್ಡಿದ್ದಾರೆ.
ಹೀಗಾಗಿ ವಿ. ಸೋಮಣ್ಣ ಚುನಾವಣೆ ಸ್ಪರ್ಧಿಸಲು ಅವಕಾಶ (Opportunity to contest elections)ನೀಡದಂತೆ ಕನ್ನಡಪರ ಸಂಘನೆಗಳು, ದೂರು ದಾಖಲಿಸಿದ್ದು, ಅವಕಾಶ ನೀಡಿದ್ದಲ್ಲಿ ಭ್ರಷ್ಟಾಚಾರಕ್ಕೆ ಸಹಕರಿಸಿದಂತಾಗುತ್ತದೆ. ಹೀಗಾಗಿ ಸಚಿವ ವಿ ಸೋಮಣ್ಣ (V. Somanna) ಅವರು ಚುನಾವಣೆ ಪ್ರಚಾರ ಮಾಡಲು ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಶಿವಕುಮಾರ್ ನಾಯಕ್ ಹಾಗೂ ಕನ್ನಡಪರ ಸಂಘಟನೆಗಳು ಮನವಿ ಮಾಡಿದೆ.