ಮಂಡ್ಯ: ಜೆಡಿಎಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿ ಕಡೇ ಗಳಿಗೆಯಲ್ಲಿ ಬೇರೊಬ್ಬರಿಗೆ ಬಿ.ಫಾರಂ ನೀಡಿರುವುದನ್ನು ಖಂಡಿಸಿ ಶಾಸಕ ಎಂ.ಶ್ರೀನಿವಾಸ್ ಶಾಸಕ ಸ್ಥಾನ ಹಾಗೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್)ದ ಅಧ್ಯಕ್ಷ ಬಿ.ಆರ್.ರಾಮಚಂದ್ರ ಅವರಿಗೆ ಬಿ.ಫಾಂ ಕೊಟ್ಟಿರುವುದಕ್ಕೆ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಬೆಂಬಲಿಗರ ಸಭೆ ನಡೆಸಿದ ಅವರು ‘ಪಕ್ಷ ಹಣಕ್ಕೆ ಟಿಕೆಟ್ ಮಾರಿಕೊಂಡಿದೆ, ಟಿಕೆಟ್ ತಪ್ಪಲು ಜಿಲ್ಲೆಯ ಇತರ ಜೆಡಿಎಸ್ ಶಾಸಕರೇ ಕಾರಣ. ಬೇರೆ ಕ್ಷೇತ್ರದ ವ್ಯಕ್ತಿ ರಾಮಚಂದ್ರ ಅವರಿಗೆ ಟಿಕೆಟ್ ನೀಡಿದ್ದಾರೆ. ಗುರುವಾರ ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದರು.ಜೆಡಿಎಸ್ ವರಿಷ್ಠರ ವಂಚನೆ ಖಂಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ’ ಎಂದರು.