ಮಾಂಸ ಪ್ರಿಯರಿಗೆ ಬಿರಿಯಾನಿ ಎಂದರೆ ಸಖತ್ ಇಷ್ಟವಾಗುತ್ತದೆ. ಚಿಕನ್, ಮಟನ್, ಮೊಟ್ಟೆ ಬಿರಿಯಾನಿ ಮಾಡಿ ಸವಿದಿರುತ್ತೀರ. ಆದರೆ ಇಂದು ಸಿಗಡಿ ಬಿರಿಯಾನಿ(prawns biryani) ಮಾಡಲು ಟ್ರೈ ಮಾಡಿ. ನಿಮ್ಮ ಮನೆ ಮಂದಿ ಇಷ್ಟ ಪಟ್ಟು ಸವಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಬೇಕಾಗುವ ಸಾಮಗ್ರಿಗಳು:
* ಸಿಗಡಿ- ಅರ್ಧ ಕೆಜಿ
* ಅಕ್ಕಿ – 2 ಕಪ್
* ಅಡುಗೆ ಎಣ್ಣೆ – ಅರ್ಧ ಕಪ್
* ಏಲಕ್ಕಿ , ದಾಲ್ಚಿನ್ನಿ ಎಲೆ, ಲವಂಗ ಚಕ್ಕೆ- ಸ್ವಲ್ಪ
* ಕಾಳುಮೆಣಸು – ಸ್ವಲ್ಪ
* ಈರುಳ್ಳಿ – 2
* ರುಚಿಗೆ ತಕ್ಕಷ್ಟು ಉಪ್ಪು
* ಖಾರದಪುಡಿ- 1 ಚಮಚ
* ಅರಿಸಿಣ ಪುಡಿ – 1 ಚಮಚ
* ಗರಂ ಮಸಾಲೆ- 1 ಚಮಚ
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯೊಂದರಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಏಲಕ್ಕಿ, ದಾಲ್ಚಿನ್ನಿ, ಚಕ್ಕೆ, ಕಾಳುಮೆಣಸು, ಲವಂಗ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು.
* ನಂತರ ಅದಕ್ಕೆ ಈರುಳ್ಳಿ, ಉಪ್ಪು ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಸಿಗಡಿ, ಖಾರದಪುಡಿ, ಅರಿಸಿನಪುಡಿ, ಗರಂ ಮಸಾಲೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅಕ್ಕಿ, ಉಪ್ಪು ಹಾಗೂ ಬೇಕಾದಷ್ಟು ನೀರು ಸೇರಿಸಿ ಬೇಯಿಸಿದರೆ ರುಚಿಯಾದ ಸಿಗಡಿ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.