ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಾರಿ ಪುಂಡರ ಹಾವಳಿ ನಿಂತಿಲ್ಲ. ಬೆಂಗಳೂರಲ್ಲಿ ಮತ್ತೆ ಮಚ್ಚು, ಲಾಂಗು ಝಳಪಿಸಿದ್ದು, ಏನಾಗ್ತಿದೆ ಸಿಲಿಕಾನ್ ಸಿಟಿಯಲ್ಲಿ ಎಂಬ ಗಾಬರಿ ಹುಟ್ಟು ಹಾಕಿದೆ.
ನಡು ರಸ್ತೆಯಲ್ಲೇ ರೌಡಿಶೀಟರ್ ಅನ್ನು ಯುವಕರ ಗುಂಪು ಅಟ್ಯಾಕ್ ಮಾಡಿದ್ದು, ಅಟ್ಯಾಕ್ ನ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಜೋಸ್ವಾ ಎಂಬ ರೌಡಿಶೀಟರನ್ನ ಪುಂಡರು ಅಟ್ಟಾಡಿಸಿದ್ದಾರೆ. ಲಾಂಗ್ ಹಿಡಿದು ನಡುರಸ್ತೆಯಲ್ಲೇ ಪುಂಡರು ಅಟ್ಟಾಡಿಸಿದರು.
ತಿಪ್ಪಸಂದ್ರದದ ಬಳಿ ಯುವಕರ ಗುಂಪಿನಿಂದ ಅಟ್ಯಾಕ್ ಮಾಡಲಾಗಿದ್ದು, ಯುವಕನ ಮೇಲೆ ಅಟ್ಯಾಕ್ ಮಾಡಿದೆ. ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.