ಮಹಾ ಸಿಎಂ ಪುತ್ರ ಸಿಎಂ ಕುರ್ಚಿಯಲ್ಲಿ ಕುಳಿತು ಬಿಟ್ರಾ..? ಟೀಕೆಗೆ ಕಾರಣವಾಯ್ತು ಶಿಂಧೆ ಪುತ್ರನ ವೈರಲ್‌ ಫೋಟೋ..!

ರಾಷ್ಟ್ರೀಯ

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪುತ್ರ ಶ್ರೀಕಾಂತ್‌ ಶಿಂಧೆ ಅವರು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಎಂ ಪುತ್ರ ಕುರಚಿ ಮೇಲೆ ಕುಳಿತಿರುವ ವಿಚಾರ ಈಗ ಟೀಕೆಗೆ ಒಳಗಾಗಿದೆ. ಶಿವಸೇನೆ ಉದ್ಧವ್‌ ಠಾಕ್ರೆ ಬಣ ಟೀಕಾಸ್ತ್ರವಾಗಿ ಬಳಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಶ್ರೀಕಾಂತ್ ಶಿಂಧೆ ಇದು ನಮ್ಮ ಮನೆಯಲ್ಲಿ ತೆಗೆದ ಚಿತ್ರವಾಗಿದೆ ಯಾರೂ ಕಿಡಿಗೇಡಿಗಳು ವಿವಾದಕ್ಕೆ ಆಸ್ಪದ ಮಾಡಿದ್ದಾರೆ. , ತಂದೆಗೆ ಕಚೇರಿಯ ಅಧಿಕೃತ ಸಿಎಂ ಕುರ್ಚಿ ಮೇಲೆ ನಾನು ಕುಳಿತುಕೊಂಡಿಲ್ಲ ಎಂದು ಶ್ರೀಕಾಂತ್‌ ಶಿಂಧೆ ಸ್ಪಷ್ಟ ಪಡಿಸಿದ್ದಾರೆ. ಇನ್ನು ನಾನು ಸಂಸದನಾಗಿದ್ದು, ನನಗೆ ಶಿಷ್ಟಾಚಾರದ ಅರಿವಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮನೆಯಿಂದಲೇ ತಂದೆಯವರು ವಿಡಿಯೋ ಕಾನ್ಫರೆನ್ಸ್ ನಡಿಸಿದ್ರು. ಅಲ್ಲಿ’ಮಹಾರಾಷ್ಟ್ರ ಸರ್ಕಾರ’ ಎಂದು ಬೋರ್ಡ್ ಹಾಕಲಾಗಿತ್ತು. ಅದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ.

ಎನ್‍ಸಿಪಿ ವಕ್ತಾರ ರವಿಕಾಂತ್ ವಾರ್ಪೆ ಟ್ವೀಟ್ ಮಾಡಿದ ಚಿತ್ರದಲ್ಲಿ ಶ್ರೀಕಾಂತ್ ಅವರು ಬಾಳಾಸಾಹೇಬ್ ಠಾಕ್ರೆಯವರ ಫೋಟೊದ ಮುಂದೆ ಕುಳಿತಿದ್ದಾರೆ. ಫೋಟೊ ಹಿಂದುಗಡೆ “ಮಹಾರಾಷ್ಟ್ರ ಸರ್ಕಾರ- ಸಿಎಂ ” ಎಂಬ ಫಲಕ ಕಾಣುತ್ತಿದೆ. ಶ್ರೀಕಾಂತ್ ಅವರನ್ನ ಎನ್ ಸಿಪಿ ಸೂಪರ್ ಸಿಎಂ ಎಂದು ಕರೆದು ಇದು ಯಾವ ರಾಜಧರ್ಮ ಎಂದು ಪ್ರಶ್ನೆ ಮಾಡಿದೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, ಡಿಸಿಎಂ ದೇವೇಂದ್ರ ಫಡ್ನವೀಸ್ ಬಗ್ಗೆ ಅನುಕಂಪವಿದೆ ಎಂದು ಲೇವಡಿ ಮಾಡಿದ್ದಾರೆ. ಉದ್ಧವ್‌ ಠಾಕ್ರೆ ಸಿಎಂ ಆಗಿದ್ದಾಗ ಆದಿತ್ಯ ಠಾಕ್ರೆ ಸಿಎಂ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾರೆ ಎನ್ನುವುದು ಭಾರತೀಯ ಜನತಾಪಕ್ಷದ ಆರೋಪವಾಗಿತ್ತು.