ಹುಬ್ಬಳ್ಳಿ/ ಧಾರವಾಢ: ಅವರೆಲ್ಲರೂ ಮಹದಾಯಿಗಾಗಿ ಸಾಕಷ್ಟು ಹೋರಾಟ ಮಾಡಿದವರು. ಈಗ ಮಹದಾಯಿ ನೀರಿಗಾಗಿ ಕಾಶಿಯಾತ್ರೆ ಮಾಡಿ ಬಂದಿದ್ದಾರೆ. ಕಣಕುಂಬಿಯ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿದ ಹೋರಾಟಗಾರರು ತಾಯಿ ನಾಡು ಹುಬ್ಬಳ್ಳಿಗೆ ಆಗಮಿಸಿದ್ದಾರ.
ಹೌದು…ಬೆಳಗಾವಿ ಜಿಲ್ಲೆಯ ಕಣಕುಂಬಿಯಿಂದ ಸಂಗ್ರಹಿಸಿದ ಮಹದಾಯಿ ನದಿಯ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಲು ಹುಬ್ಬಳ್ಳಿಯಿಂದ. ಸಾವಿರಾರು ಜನ ಮಹದಾಯಿ ಹೋರಾಟಗಾರರು ಕಾಶಿಗೆ ಪ್ರಯಾಣ ಬೆಳೆಸಿದ್ದರು. ಮಹದಾಯಿಗಾಗಿ ವಿನೂತನ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸುವ ಮೂಲಕ ತಾಯ್ನಾಡಿಗೆ ಮರಳಿದ್ದಾರೆ.
ಇನ್ನೂ ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ಸೇರಿದ ಧಾರವಾಡ, ಬಾಗಲಕೋಟ, ಗದಗ ಹಾಗೂ ಹಾವೇರಿ ಜಿಲ್ಲೆಯಿಂದ ಆಗಮಿಸಿದ ಹೋರಾಟಗಾರರು ಚನ್ನಮ್ಮ ವೃತ್ತ ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಸಾಗಿ ರಾತ್ರಿ 8 ಗಂಟೆಗೆ ರೈಲ್ವೆ ನಿಲ್ದಾಣ ತಲುಪಿದ್ದರು. ಈಗ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿ ಹುಬ್ಬಳ್ಳಿಗೆ ಆಗಮಿಸಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳ ಮೇಲೆ ನಮಗೆ ವಿಶ್ವಾಸ ಹೊರಟು ಹೋಗಿದೆ. ನ್ಯಾಯಾಧೀಕರಣ ತೀರ್ಪು ನೀಡಿ ಹಲವು ವರ್ಷಗಳಾದರೂ ರಾಜಕೀಯ ಪಕ್ಷಗಳಿಂದ ನೀರು ತರಲು ಸಾಧ್ಯವಾಗಿಲ್ಲ. ಈಗ ಉಳಿದಿರುವುದು ಒಂದೇ ಮಾರ್ಗ. ಮಹದಾಯಿ ನೀರನ್ನು ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿ ನಮ್ಮ ಬೇಡಿಕೆ ಈಡೇರಿಸು ಎಂದು ಬೇಡಿಕೊಂಡಿದ್ದೇವೆ ಎಂದು ರೈತ ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.