ಬೆಂಗಳೂರು:- ನಗರದ ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್ ಗೆ ಸಂಬಧಪಟ್ಟಂತೆ ಆರೋಪಿ ಬಂಧನಕ್ಕೆ ಐದು ತಂಡಗಳ ರಚನೆ ಮಾಡಲಾಗಿದೆ.ಮಹಿಳೆಯನ್ನ ಕೊಂದಿರೋ ಹಂತಕ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಮಾಂಸದ ಮುದ್ದೆಯನ್ನ ಇಟ್ಟು ಎಸ್ಕೇಪ್ ಆಗಿದ್ದಾನೆ.ಇದೀಗ ಕೊಲೆಗೈದಿರೋ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ದೇಹವನ್ನ 50ಕ್ಕೂ ಹೆಚ್ಚು ಪೀಸ್ ಮಾಡಿಟ್ಟು ಎಸ್ಕೇಪ್ ಆಗಿರೋ ಕ್ರೂರಿಯ ಜಾಡು ಹಿಡಿದು ಪೊಲೀಸರು ಬೆನ್ನತ್ತಿದ್ದಾರೆ. ಕೇಂದ್ರ ವಿಭಾಗದ ಐವರು ಇನ್ಸ್ಪೆಕ್ಟರ್ಗಳ ನೇತೃತ್ವದ ತಂಡಗಳು ಕಾರ್ಯಾಚರಣೆಗೆ ಇಳಿದಿವೆ.
ಮಹಾಲಕ್ಷ್ಮೀ ಎಲ್ಲೆಲ್ಲೆ ಕೆಲಸ ಮಾಡ್ತಿದ್ಲು ಅಲ್ಲಿ ವಿಚಾರಣೆ ನಡೆಸೋದು. ಜೊತೆಗೆ ಕಳೆದ ಮೂರು ತಿಂಗಳಿಂದ ಈಕೆಯ ಜೊತೆ ಸಂಪರ್ಕ ಇದ್ದವರ ಮಾಹಿತಿ ಕಲೆ ಹಾಕುವುದು. ನಿತ್ಯ ಯಾರ ಜೊತೆಗೆ ಹೋಗ್ತಿದ್ಲು-ಬರ್ತಿದ್ಲು ಎಂಬ ಮಾಹಿತಿ ಕಲೆ ಹಾಕೋದು ಮೊದಲ ತಂಡದ ಕಾರ್ಯವಾಗಿದೆ.
ಕೊಲೆ ನಡೆದ ಏರಿಯಾದ ಸಂಪೂರ್ಣ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡೋದು. ಮಹಾಲಕ್ಷ್ಮೀ ಕೊನೆಯ ಬಾರಿ ಕೆಲಸಕ್ಕೆ ಹೋಗಿದ್ದ ಸಿಸಿಟಿವಿ ಚೆಕ್ ಮಾಡೋದು. ಹೀಗೆ ಸರಿಸುಮಾರು 150 ಕ್ಕೂ ಅಧಿಕ ಸಿಸಿಟಿವಿಗಳ ಪರಿಶೀಲನೆ ನಡೆಸೋದು 2ನೇ ತಂಡದ ಕಾರ್ಯವಾಗಿದೆ.
ಮಹಾಲಕ್ಷ್ಮೀ ಜೊತೆಗೆ ಯಾಱರು ಟಚ್ನಲ್ಲಿದ್ರು, ಅವರ ಮಾಹಿತಿ ಕಲೆ ಹಾಕುವುದು. ಕೊನೆ ಬಾರಿಗೆ ಯಾರಿಗೆ ಕಾಲ್ ಮಾಡಿದ್ಲು ಅದರ ಬಗ್ಗೆ ಮಾಹಿತಿ ಸಂಗ್ರಹಿಸೋದು. ಒಂದು ತಿಂಗಳಿನಿಂದ ಯಾರಿಗೆ ಹೆಚ್ಚು ಕರೆ ಮಾಡಿದ್ದಾಳೆ ಅಂತ ಮೂರನೇ ತಂಡ ತನಿಖೆ ನಡೆಸಲಿದೆ.
ಯಾರಾದ್ರೂ ಹೊರ ರಾಜ್ಯದಲ್ಲಿ ಇರೋರು ಸಂಪರ್ಕದಲ್ಲಿ ಇದ್ರಾ? ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇರೋರು ಕೊಲೆ ಲೊಕೇಷನ್ನಲ್ಲಿ ಇದ್ರಾ? ಅಂತ ನಾಲ್ಕನೇ ತಂಡ ತನಿಖೆ ನಡೆಸಿದ್ರೆ, ಸ್ಥಳ ಮಹಜರು, ಪೋಸ್ಟ್ ಮಾರ್ಟಂಗೆ ಸಂಬಂಧಿಸಿದಂತೆ ಐದನೇ ತಂಡ ಮಾಹಿತಿ ಸಂಗ್ರಹಿಸಲಿದೆ.
ಇಂಥಾ ಬರ್ಬರ ಹತ್ಯೆಗೈದಿರೋ ಆ ಸೈಕೋ ಕಿಲ್ಲರ್ನ ಮಾತ್ರ ಮೊದಲು ಹೆಡೆಮುರಿ ಕಟ್ಟಬೇಕಿದೆ.