ಬೆಂಗಳೂರು ;- ಕೃಷಿ ಕ್ಷೇತ್ರಕ್ಕೆ ನಷ್ಟ ತಪ್ಪಿಸಲು ಲ್ಯಾಂಡ್ ಬ್ಯಾಂಕ್ಗೆ ಮೇಜರ್ ಸರ್ಜರಿ ಮಾಡುವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಭೂಬ್ಯಾಂಕ್ ಸಮಗ್ರ ಪರಿಶೋಧನೆ ನಡೆಸಿ, ವಸ್ತುಸ್ಥಿತಿ ವರದಿ ಸಲ್ಲಿಸಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿರುವೆ. ಸ್ವಾಧೀನವಾದ ಭೂಮಿ, ವರ್ಷ, ಬಳಕೆ, ಸದ್ಯದ ಸ್ಥಿತಿ, ವಿಳಂಬಕ್ಕೆ ಕಾರಣ ಇತ್ಯಾದಿ ವಿವರ ಒಳಗೊಂಡ ಮಾಹಿತಿ, ಅಂಕಿ-ಅಂಶಗಳ ವರದಿ ನಿರೀಕ್ಷಿಸಿರುವೆ. ಸಮಗ್ರ ವರದಿ ಬಯಸಿದ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲಿದ್ದು, ಪರಾಮಶಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟು ಮುಂದಿನ ಕ್ರಮಗಳ ಬಗ್ಗೆ ಸಲಹೆ ಪಡೆಯುವೆ ಎಂದರು.
ಇನ್ನೂ ತೆರೆಮರೆ ಪ್ರಯತ್ನ ನಡೆಸಿ ಫಾಕ್ಸ್ಕಾನ್ ಮೊಬೈಲ್ ಘಟಕ ರಾಜ್ಯದಲ್ಲೇ ಸ್ಥಾಪನೆಯಾಗುವಂತೆ ನೋಡಿಕೊಂಡು, ರ್ತಾಕ ಅಂತ್ಯ ಕಾಣಿಸಿದ್ದೇವೆ ಎಂದು ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದರು.