ಬೆಂಗಳೂರು ಗ್ರಾಮಾಂತರ: ಹೊಸಕೋಟೆ ನಗರವನ್ನು ತಂತಿಗಳ ಮುಕ್ತಮಾಡಿ ನಗರಕ್ಕೆ ಅಂಡರ್ ಗ್ರೌಂಡಿಂಗ್ ಕೇಬಲ್ ಮಾಡಿಕೊಡಬೇಕಾಗಿ ಇಂಧನ ಸಚಿವರಲ್ಲಿ ಮನವಿ ಮಾಡಿದ ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ ನಗರದಲ್ಲಿ ಕರೆಂಟ್ ತಂತಿಗಳು ಜೋಳಾಡುತ್ತಿರುವ ಕಾರಣದಿಂದಾಗಿ, ಅನೇಕರು ಅದನ್ನು ಮುಟ್ಟಿ ಶಾಕ್ ಹೊಡೆದ ಪರಿಣಾಮ ತೊಂದರೆಗಳನ್ನು ಅನುಭವಿಸಿದ್ದಾರೆ.
ಈ ಹಿನ್ನಲೆಯಲ್ಲಿ ಹೊಸಕೋಟೆ ನಗರವನ್ನು ತಂತಿಗಳ ಮುಕ್ತವನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಹೊಸಕೋಟೆ ನಗರಕ್ಕೆ (ಅಂಡರ್ ಗ್ರೌಂಡಿಂಗ್ ಕೇಬಲ್) ಮಾಡಿಕೊಡಬೇಕಾಗಿದೆ ಎಂದು ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರಲ್ಲಿ ಮನವಿ ಮಾಡಿದರು.