ಬೆಂಗಳೂರು:2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಹೀಗಾಗಿ ಕಡ್ಡಾಯ ಮತದಾನ ಮಾಡುವಂತೆ ಬಿಎಂಟಿಸಿಯಿಂದ ವಿನೂತನ ಜಾಗೃತಿ ಮೂಡಿಸಲಾಗ್ತಿದೆ. ಮತದಾನದ ಸಂಖ್ಯೆ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮತದಾನ ಹಾಕುವಂತೆ ಮನವಿ ಮಾಡಲಾಗ್ತಿದೆ.
ಬಸ್ ನಿಲ್ದಾಣಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಚುನಾವಣ ಪರ್ವ, ನಮ್ಮ ಗರ್ವ, ಮತದಾನಕ್ಕಿಂತ ಇನ್ನೊಂದಿಲ್ಲ ಎಂಬ ಲೈನ್ಗಳನ್ನು ಹಾಕಲಾಗಿದೆ.
ಖಂಡಿತವಾಗಿಯೂ ನಾನು ಮತ ಚಲಾಯಿಸುತ್ತೇನೆ. ದಿನಾಂಕ 26-04-24 ರಂದು ತಪ್ಪದೇ ಮತದಾನ ಮಾಡಿ ಎಂದು ಬಸ್ನಲ್ಲಿ ಜಾಗೃತಿ ಮೂಡಿಸಲಾಗ್ತಿದೆ.
ಭಾರತದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಿಂದ ಮತದಾನ ಆರಂಭವಾಗಲಿದ್ದು, ಜೂನ್ 1ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 4, 2024ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 7 ರಂದು 2ನೇ ಹಂತದ ಚುನಾವಣೆ ನಡೆಯಲಿದೆ.
ಮೊದಲ ಹಂತದ ಚುನಾವಣೆ- ಏಪ್ರಿಲ್ 19, 2024, 2ನೇ ಹಂತದ ಚುನಾವಣೆ- ಏಪ್ರಿಲ್ 26, 2024,3ನೇ ಹಂತದ ಚುನಾವಣೆ- ಮೇ 7, 2024, 4ನೇ ಹಂತದ ಚುನಾವಣೆ- ಮೇ 13, 2024, 5ನೇ ಹಂತದ ಚುನಾವಣೆ- ಮೇ 20, 2024, 6ನೇ ಹಂತದ ಚುನಾವಣೆ- ಮೇ 25, 2024, 7ನೇ ಹಂತದ ಚುನಾವಣೆ- ಜೂನ್ 1, 2024.