ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಹೊಣೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಫೋನ್ಗಳ ಭಲಕೆಯನ್ನು ಹೆಚ್ಚಾಗಿ ಮಾಡುತ್ತಿದ್ದೇವೆ.
ನಾವು ನಮ್ಮ ಕಣ್ಣುಗಳಿಗೆ ಹೆಚ್ಚಿನ ಒತ್ತಡ ಒಂಟಾಗುವುದರಿಂದ ಕಣ್ಣುಗಳಲ್ಲಿ ತುರಿಕೆ, ಕೆಂಪು ಮತ್ತು ಉರಿಯೂತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಕಲವು ಪರಿಹಾರ ಮಾರ್ಗಗಳ ಕುರಿತಾಗಿ ತಿಳಿದುಕೊಳ್ಳೋಣ…
1) ನೈಸರ್ಗಿಕ ಗುಣಲಕ್ಷಣಗಳನ್ನು ಹೊಂದಿರುವ ಸೌತೆಕಾಯಿಯು ಕಣ್ಣುಗಳಿಗೆ ಇರುವ ಒತ್ತಡವನ್ನು ಕಡಿಮೆ ಮಾಡಲು ಒಳ್ಳೆಯದಾಗಿದೆ. ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ನಿಮ್ಮ ಕಣ್ಣುಗಳ ಮೇಲೆ ಇರಿಸಿ.
2) ರೋಸ್ ವಾಟರ್: ರೋಸ್ ವಾಟರ್ ಕಣ್ಣಿಗೆ ಹಿತವಾದ, ನೈಸರ್ಗಿಕ ಪರಿಹಾರವಾಗಿದೆ. ಹತ್ತಿ ಉಂಡೆ ಮೂಲಕ ರೋಸ್ ವಾಟರ್ನಲ್ಲಿ ನೆನೆಸಿ ಮತ್ತು ಅದನ್ನು ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಇರಿಸಿ. ಇದು ಕಿರಿಕಿರಿಯನ್ನು ತೆಗೆದುಹಾಕಲು ಮತ್ತು ನಿಮ್ಮ ಕಣ್ಣುಗಳನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ
3) ಅಲೋವೆರಾ: ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಅಲೋವೆರಾವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಆದರೆ ಇದು ಕಣ್ಣಿನ ತುರಿಕೆಗೆ ಉತ್ತಮ ಪರಿಹಾರವಾಗಿದೆ. ಅಲೋವೆರಾ ಜೆಲ್ ಜತೆಗೆ ತಣ್ಣೀರು ಮಿಶ್ರಣ ಮಾಡಿ ಮತ್ತು ಹತ್ತಿ ಉಂಡೆಯ ಸಹಾಯದಿಂದ ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಅನ್ವಯಿಸಿ. ಕಣ್ಣಿಗೆ ತಂಪಾದ ಅನುಭವ ನೀಡುತ್ತದೆ.
4) ಕಣ್ಣಿಗೆ ವ್ಯಾಯಾಮ: ಕಣ್ಣಿಗೆ ಚಲನೆ ಬೇಕೆ ಬೇಕು ಹೀಗಾಗಿ ಆಗಾಗ್ಗೆ ಕಣ್ಣನ್ನು ಮಿಟುಕಿಸುತ್ತಿರಬೇಕು. ಮೇಲೆ ಕೇಳಗೆ ನೋಡಬೇಕು, ಆರಾಮದಾಯಕ ಭಂಗಿಯಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಇದೊಂದು ಸುಲಭ ಮತ್ತು ಸರಳ ವ್ಯಾಯಾಮ. ಮೊದಲಿಗೆ ನೀವು ನಿಮ್ಮ ಕಣ್ಣುಗಳನ್ನು ತೆರೆದು ಆರಾಮವಾಗಿ ಕುಳಿತುಕೊಳ್ಳಬೇಕು.
5)ಸಮತೋಲಿತ ಆಹಾರವನ್ನು ಸೇವಿಸಿ: ನೀವು ತಿನ್ನುವ ಆಹಾರದಲ್ಲಿ ಎಥೇಚ್ಚವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಬೇಕು. ವಿಶೇಷವಾಗಿ, ಹಳದಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು. ಒಮೆಗಾ-೩ ಕೊಬ್ಬಿನಾಮ್ಲ ಹೆಚ್ಚಿರುವ ಮೀನುಗಳನ್ನು ತಿನ್ನುವುದು ಕೂಡ ಉತ್ತಮ ಕಣ್ಣಿಗೆ ಸಹಾಯ ಮಾಡುತ್ತದೆ.