ಬಾಲಿವುಡ್ ನಟಿ ಮಲೈಕಾ ಅರೋರಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆಗಿನ ಸಂಬಂಧದಿಂದ ಮಲೈಕ ಸುದ್ದು ಮಾಡುತ್ತಿರುತ್ತಾರೆ. ಹೋದಲ್ಲಿ ಬಂದಲೆಲ್ಲಾ ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದ ಜೋಡಿ ಹಕ್ಕಿಗಳು ಏಕಾ ಏಕಿ ಬೇರೆಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೆಲ್ಲಾ ಜಸ್ಟ್ ಗಾಳಿ ಸುದ್ದಿಯಷ್ಟೇ ಎಂದು ಮಲೈಕಾ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ಬ್ರೇಕಪ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಲೈಕಾ ಮ್ಯಾನೇಜರ್ ‘ಇಲ್ಲ ಇಲ್ಲ.. ಎಲ್ಲವೂ ವದಂತಿ’ ಎಂದು ಉತ್ತರಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವೆ ಬ್ರೇಕಪ್ ಆಗಿಲ್ಲ ಎನ್ನಲಾಗುತ್ತಿದೆ.
ಸೆಲೆಬ್ರಿಟಿಗಳ ನಡುವೆ ಪ್ರೀತಿ-ಪ್ರೇಮ ಚಿಗುರುವುದು, ಮದುವೆ ಆಗುವುದು, ಬ್ರೇಕಪ್, ವಿಚ್ಛೇದನ ಆಗುವುದು ತುಂಬ ಕಾಮನ್. ಹಾಗಾಗಿ ಪದೇ ಪದೇ ಇಂಥ ಗಾಸಿಪ್ಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಂತಾರೆ. ಹಾಗಾಗಿ ಗಾಸಿಪ್ ಮಂದಿ ಈ ವದಂತಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಷ್ಟು ಬೇಗ ಸ್ವತಃ ಮಲೈಕಾ ಅರೋರಾ ಅಥವಾ ಅರ್ಜುನ್ ಕಪೂರ್ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವೆ ಸಾಕಷ್ಟು ವಯಸ್ಸಿನ ಅಂತರ ಇದೆ. ಹಾಗಿದ್ದರೂ ಕೂಡ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. 2019ರಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಆದರೆ ಮದುವೆ ಆಗುವ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಈಗ ಅವರ ಬ್ರೇಕಪ್ ಬಗ್ಗೆ ಗಾಸಿಪ್ ಹಬ್ಬಿದೆ. ಆದ್ರೆ ಇದಕ್ಕೆಲ್ಲಾ ಜೋಡಿ ಹಕ್ಕಿಗಳು ಉತ್ತರಿಸಿದ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ.