ಬಾಲಿವುಡ್ ನಟಿ, ಅರ್ಜುನ್ ಕಪೂರ್ ಪ್ರೇಯಸಿ ಮಲೈಕಾ ಆರೋರಾ ಗರ್ಭಿಣಿ ಎನ್ನುವ ವಿಚಾರ ಬಿಟೌನ್ ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ವಿಷಯದ ಕುರಿತಾಗಿಯೇ ಅನೇಕರು ಟ್ರೋಲ್ ಮಾಡಿದ್ದು, ಇದೀಗ ಟ್ರೋಲಿಗರಿಗೆ ಅರ್ಜುನ್ ಕಪೂರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಲೈಕಾ ಹಾಗೂ ಅರ್ಜುನ್ ಕಪೂರ್ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಎಲ್ಲೇ ಹೋದರು ಬಂದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಜೋಡಿ ಹಕ್ಕಿಗಳು ಅಧಿಕೃತವಾಗಿ 2ನೇ ಮದುವೆ ಘೋಷಣೆ ಮಾಡದೇ, ಮಗು ಮಾಡಿಕೊಂಡಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಈ ಕುರಿತು ಮಲೈಕಾ ಬಾಯ್ ಫ್ರೆಂಡ್, ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಲೈಕಾ ಗರ್ಭಿಣಿ ಎಂದು ಸುಳ್ಳು ಹಬ್ಬಿಸುತ್ತಿರುವವರ ಬಗ್ಗೆ ಕಿಡಿಕಾರಿರುವ ಅರ್ಜುನ್, ‘ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಬೇರೆಯವರ ಜೀವನದಲ್ಲಿ ಯಾರೂ ಆಟವಾಡಬಾರದು. ಬೇರೆಯವರ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವು ಆಗದಂತೆ ಇರಬೇಕು’ ಎಂದಿದ್ದಾರೆ.