ಬಾಲಿವುಡ್ ನ ಖ್ಯಾತ ನಟಿ ಕಂ ಮಾಡೆಲ್ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಬಾಂದ್ರದಲ್ಲಿರುವ ತಮ್ಮ ಮನೆಯ ಕಟ್ಟಡದಿಂದ ಜಿಗಿದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದು ಅನೇಕ ಸೆಲೆಬ್ರಿಟಿಗಳು ಅನಿಲ್ ಅರೋರಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಮಲೈಕಾ ಮಾಜಿ ಪ್ರಿಯಕರ ಅರ್ಜುನ್ ಕಪೂರ್ ಕೂಡ ಬಂದು ಅನಿಲ್ ಅರೋರಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ವಿದೇಶ ಪ್ರವಾಸದಲ್ಲಿದ್ದ ಮಲೈಕಾಗೆ ತಂದೆಯ ಸಾವಿನ ವಿಷಯ ತಿಳಿದು ಶಾಕ್ ಆಗಿದೆ. ತಂದೆಯ ಮನೆಗೆ ಮಲೈಕಾ ಓಡೋಡಿ ಬಂದಿದ್ದಾರೆ. ಬಳಿಕ ಅರ್ಜುನ್ ಕಪುರ್ ಕೂಡ ಬಂದಿದ್ದಾರೆ. ಕೆಲವೇ ತಿಂಗಳ ಹಿಂದೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಬ್ರೇಕಪ್ ಮಾಡಿಕೊಂಡರು.
ಬ್ರೇಕಪ್ ಆಗಿದ್ದರೂ ಕೂಡ ಕಷ್ಟದ ಸಮಯದಲ್ಲಿ ಮಲೈಕಾ ಅರೋರಾ ಅವರ ಬೆಂಬಲಕ್ಕೆ ನಿಲ್ಲಲು ಅರ್ಜುನ್ ಕಪೂರ್ ಅವರು ಬಂದಿದ್ದಾರೆ. ಅವರು ಮಾತ್ರವಲ್ಲದೇ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಆಗಮಿಸಿ ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ ಮುಂತಾದವರು ಸಹ ಅನಿಲ್ ಅರೋರಾಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಮೂಲತಃ ಪಂಜಾಬ್ ನವರಾದ ಅನಿಲ್ ಅರೋರ ಮುಂಬೈನಲ್ಲಿ ಅವರು ವಾಸವಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಾಂದ್ರಾ ಅಪಾರ್ಟ್ಮೆಂಟ್ಗೆ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಅನಿಲ್ ಅರೋರಾ ಅವರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂಬುದು ನಿಗೂಢವಾಗಿದ್ದು, ಅಪಾರ್ಟ್ಮೆಂಟ್ನ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.