ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಡೇಟಿಂಗ್ ಮಾಡ್ತಿದ್ದಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇತ್ತೀಚೆಗೆ ಇಬ್ಬರು ದೂರ ದೂರವಾಗಿದ್ದಾರೆ. ಆದ್ರೆ ಈ ಬಗ್ಗೆ ಇಬ್ಬರು ಕೂಡ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಮಲೈಕಾ ಅರೋರಾ ಅವರು ಹೊಸ ವ್ಯಕ್ತಿ ಜೊತೆ ಡೇಟಿಂಗ್ ಮಾಡಲು ಶುರುಮಾಡಿದ್ದು ಸದ್ಯ ಮಲೈಕಾ ಆತನೊಂದಿಗಿರುವ ಫೋಟೋ ವೈರಲ್ ಆಗಿದೆ.
ಮಲೈಕಾ ಅರೋರಾ ಅವರು ಸದ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸ್ಪೇನ್ನಲ್ಲಿ ಅವರು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರಲ್ಲಿ ಹೊಸ ವ್ಯಕ್ತಿಯನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಹಾಗಂತ ಈ ಫೋಟೋದಲ್ಲಿ ಆ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ಕಾಣುವುದಿಲ್ಲ. ಮುಖ ಕಾರಣದ ರೀತಿಯಲ್ಲಿ ಬ್ಲರ್ ಮಾಡಿ ಈ ಫೋಟೋವನ್ನು ಮಲೈಕಾ ಅರೋರಾ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಲೈಕಾ ಅರೋರಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಿಲೇಷನ್ಶಿಪ್ ಕುರಿತು ಒಂದು ನೋಟ್ ಹಂಚಿಕೊಂಡಿದ್ದರು. ‘ನಿಮ್ಮ ಹೃದಯ, ಮನಸ್ಸು ಹಾಗೂ ದೇಹದ ಜೊತೆ ನೀವು ಹೊಂದಿರುವ ಸಂಬಂಧವೇ ನಿಮ್ಮ ಜೀವನದಲ್ಲಿನ ಅತಿ ದೀರ್ಘವಾದ ರಿಲೇಷನ್ಶಿಪ್’ ಎಂದು ಅವರು ಬರೆದುಕೊಂಡಿದ್ದರು. ಅರ್ಜುನ್ ಕಪೂರ್ ಅವರ ಸಹವಾಸವನ್ನು ಅವರು ಸಂಪೂರ್ಣ ತೊರೆದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.