ಮಲಯಾಳಂ ಚಿತ್ರ ರಂಗದ ಖ್ಯಾತ ನಿರ್ದೇಶಕ ಹಾಗೂ ಕೇರಳದ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರಾಮಸಿಂಹನ್ ಅಬೂಬಕ್ಕ ಬಿಜೆಪಿ ತೊರೆಯುವುದಾಗಿ ಹೇಳಿಕೊಂಡಿದ್ದಾರೆ. ‘ಎಲ್ಲದರಿಂದಲೂ ಮುಕ್ತಿ ಪಡೆದುಕೊಂಡು ಧರ್ಮದೊಂದಿಗೆ ಇರುತ್ತೇನೆ’ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಸದ್ಯ ಅಬೂಬಕ್ಕರ್ ಬರಹ ಚರ್ಚೆಗೆ ಕಾರಣವಾಗಿದೆ.
ಮೂಲತಃ ಮುಸ್ಲಿಂ ಧರ್ಮದವರಾಗಿದ್ದ ರಾಮಸಿಂಹನ್ ಅಬೂಬಕ್ಕರ್ 2021ರಲ್ಲಿ ಇಸ್ಲಾಂ ತೊರೆದು ತಮ್ಮ ಹೆಸರನ್ನು ರಾಮಸಿಂಹನ್ ಅಬೂಬಕ್ಕರ್ ಎಂದು ಬದಲಾಯಿಸಿಕೊಂಡಿದ್ದರು. ಅದೇ ವರ್ಷ ಅವರನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯತ್ವ ಹಾಗೂ ಜವಾಬ್ದಾರಿ ಹುದ್ದೆಗಳನ್ನು ನೀಡಿತ್ತು.
ಆದರೆ ಇದೀಗ ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರಕಟಿಸಿರುವ ಅಬೂಬಕ್ಕರ್, ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಪಕ್ಷದ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡಿದ್ದು, ಯಾವ ಪಕ್ಷಕ್ಕೂ ಹೋಗದೇ ಧರ್ಮದ ಅನುಸಾರ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದಿದ್ದಾರೆ.