ಮಲಯಾಳಂನ ಟಿವಿ ನಟಿಯೊಬ್ಬಾಕೆಯನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ನಟಿ ಹನಿಟ್ರ್ಯಾಪ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ಪೀಕಿಸುತ್ತಿದ್ದಳಂತೆ.
ಪರವುರ್ನಲ್ಲಿ ಹನಿಟ್ರ್ಯಾಪ್ನಲ್ಲಿ ತೊಡಗಿಕೊಂಡಿದ್ದ ಟಿವಿ ನಟಿ ಹಾಗೂ ಆಕೆಯ ಗೆಳೆತಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಿತ್ಯಾ ಸಸಿ ಎಂಬಾಕೆ ಆಕೆಯ ಗೆಳೆಯಯೊಟ್ಟಿಗೆ ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರಂತೆ. ವೃದ್ಧನೋರ್ವನನ್ನು ಹನಿಟ್ರ್ಯಾಪ್ ಬಲಗೆ ಬೀಳಿಸಿ ಸುಮಾರು 11 ಲಕ್ಷ ಮೊತ್ತವನ್ನು ನಿತ್ಯಾ ಸಸಿ ಹಾಗೂ ಆಕೆಯ ಗೆಳೆಯ ಪೀಕಿಸಿದ್ದರು.
ಪೊಲೀಸರು ಹೇಳಿರುವಂತೆ, 75 ವರ್ಷದ ಮಾಜಿ ಸೈನಿಕ ಹಾಗೂ ಕೇರಳ ವಿಶ್ವವಿದ್ಯಾನಿಲಯದ ಮಾಜಿ ನೌಕರನೊಬ್ಬನನ್ನು ನಟಿ ತನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಳು. ಮಾಜಿ ಸೈನಿಕ, ತನ್ನ ಮನೆಯನ್ನು ಬಾಡಿಗೆಗೆ ನೀಡಲು ಯತ್ನಿಸುತ್ತಿದ್ದಾಗ ಇವರ ಸಂಪರ್ಕಕ್ಕೆ ಬಂದ ನಟಿ ಆತ್ಮೀಯಳಾಗಿ, ಕೊನೆಗೆ ಮನೆಗೆ ಕರೆಸಿಕೊಂಡು ಸೈನಿಕನನ್ನು ವಿವಸ್ತ್ರನನ್ನಾಗಿ ಮಾಡಿ, ಆಕೆಯೂ ಬೆತ್ತಲಾಗಿ ಬಲವಂತವಾಗಿ ಒಟ್ಟಿಗೆ ಫೋಟೊ ತೆಗೆಸಿಕೊಂಡರಂತೆ. ಆ ಫೋಟೊಗಳನ್ನಿಟ್ಟುಕೊಂಡು 25 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆಂದು ತಿಳಿದು ಬಂದಿದೆ.