ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರ ಮೇಲೆ ‘ಮಾಟಮಂತ್ರ‘ ಮಾಡದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಸಚಿವರೊಬ್ಬರನ್ನ ಬಂಧಿಸಲಾಗಿದೆ.
ಮಾಲ್ಡೀವ್ಸ್’ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಸಚಿವ ಫಾತಿಮತ್ ಶಮ್ನಾಜ್ ಅಲಿ ಸಲೀಮ್ ಮತ್ತು ಇತರ ಇಬ್ಬರನ್ನ ರಾಜಧಾನಿ ಮಾಲೆಯಿಂದ ಭಾನುವಾರ ಬಂಧಿಸಲಾಗಿದೆ ಎಂದು ಮಾಲ್ಡೀವ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆ ಬಾಕಿ ಇರುವ ಕಾರಣ ಶಮ್ನಾಜ್ ಅವರನ್ನ ಒಂದು ವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು ಅವರ ಮೇಲೆ ಮಾಟಮಂತ್ರ ಮಾಡಿದ್ದಕ್ಕಾಗಿ ಶಮ್ನಾಜ್ ಅವರನ್ನ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.