ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಮಂಗಳವಾರ ಮುಂಜಾನೆ ಟಿಎಂಸಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಬದಲಾಯಿಸಲಾಗಿದೆ ಹ್ಯಾಕರ್ಗಳು ಟಿಎಂಸಿಯ ಪ್ರೊಫೈಲ್ ಚಿತ್ರ ಮತ್ತು ಹೆಸರನ್ನು ಬದಲಾಯಿಸಿದ್ದಾರೆ.
ಪ್ರೊಫೈಲ್ನಲ್ಲಿ ಟಿಎಂಸಿ ಬದಲಿಗೆ ಯುಗಾ ಲ್ಯಾಬ್ಸ್ ಎಂದು ಬರೆಯಲಾಗಿದೆ. ಈ ಬಗ್ಗೆ ಟಿಎಂಸಿ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹ್ಯಾಕ್ ಆದ ಬಳಿಕ ಯಾವುದೇ ಹೊಸ ಟ್ವೀಟ್ನ್ನು ಪೋಸ್ಟ್ ಮಾಡಿಲ್ಲ, ಈ ಬಗ್ಗೆ ಟ್ವಿಟ್ಟರ್ಗೆ ಮಾಹಿತಿ ನೀಡಲಾಗಿದ್ದು, ಸರಿಪಡಿಸುವಂತೆ ಕೇಳಿಕೊಳ್ಳಲಾಗಿದೆ. ಇದು 2020 ರ ಪ್ರಕರಣಕ್ಕೆ ಹೋಲುತ್ತದೆ, ಇದರಲ್ಲಿ ಯುಎಸ್ನ ಹಲವಾರು ಪ್ರಮುಖ ವ್ಯಕ್ತಿಗಳ ಟ್ವಿಟರ್ ಹ್ಯಾಂಡಲ್ಗಳು ಹ್ಯಾಕ್ ಆಗಿದ್ದವು.