ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ನಾಯಿಮರಿಯನ್ನು (Puppy) ಹಿಡಿದುಕೊಂಡು, ಟ್ರೆಡ್ಮಿಲ್ನಲ್ಲಿ (Treadmill) ನಡೆಯುವ ವೀಡಿಯೋವೊಂದು ಹರಿದಾಡುತ್ತಿದೆ. ಈ ಬಗ್ಗೆ ಮಮತಾ ಬ್ಯಾನರ್ಜಿ ಅವರೇ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಕೆಲವೊಮ್ಮೆ ಹೆಚ್ಚಿನ ಪ್ರೇರೇಪಣೆ ಅಗತ್ಯವಿರುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಮಮತಾ ಬ್ಯಾನರ್ಜಿ ಅವರು ಬಿಳಿ ಸೀರೆಯಲ್ಲಿ ಟ್ರೆಡ್ಮಿಲ್ನಲ್ಲಿ ವಾಕಿಂಗ್ ಮಾಡುತ್ತಾ, ಒಂದು ನಾಯಿಮರಿ ಯನ್ನು ತಮ್ಮ ಮುಂದೆ ಹಿಡಿದುಕೊಂಡಿದ್ದಾರೆ. ನಾಯಿ ಮರಿಯನ್ನೇ ನೋಡುತ್ತಾ ವಾಕಿಂಗ್ ಮಾಡುತ್ತಿದ್ದಾರೆ. ಕಾಮೆಂಟ್ಗಳನ್ನು ಆಫ್ ಮಾಡಲಾಗಿದೆ, ವೀಡಿಯೊವನ್ನು 15,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪ್ರತಿನಿತ್ಯ ವ್ಯಾಯಾಮ ವನ್ನು ಮಾಡುತ್ತಾರೆ. ಇವರು 2019ರಲ್ಲಿ ಜಾಗೃತಿ ಮೂಡಿಸಲು ಡಾರ್ಜಿಲಿಂಗ್ನಲ್ಲಿ 10 ಕಿಮೀ ದೂರ ಜಾಗಿಂಗ್ ಮಾಡಿದ್ದರು.