ಅಮೆರಿಕದ ಒರೆಗಾನ್ನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನಿಂದ ಸುಮಾರು 1.6 ಕೋಟಿ ರೂಪಾಯಿ ರಸ್ತೆಗೆ ಎಸೆದು ಸುದ್ದಿಯಾಗಿದ್ದಾರೆ. ತಾನು ಇತರರಿಗೆ ನೆರವಾಗುತ್ತೇನೆ ಎಂದು ವ್ಯಕ್ತಿ ಹೇಳಿಕೊಂಡಿದ್ದು ಘಟನೆಯ ಬಳಿಕ ಆತನ ಕುಟುಂಬ ಆಘಾತಕ್ಕೊಳಗಾಗಿದೆ.
38 ವರ್ಷದ ಕಾಲಿನ್ ಡೇವಿಸ್ ಮೆಕಾರ್ಥಿ ಎಂಬ ವ್ಯಕ್ತಿಯನ್ನು ಕೋಟಿ ಕೋಟಿ ಹಣವನ್ನು ರಸ್ತೆಗೆ ಎಸೆದಿದ್ದು ಇದೀಗ ಮೆಕಾರ್ಥಿಯಿಂದಾಗಿ ತಮ್ಮ ಕುಟುಂಬ ಅಪಾರ ನಷ್ಟವನ್ನು ಅನುಭವಿಸಿದೆ ಎಂದು ಮೆಕಾರ್ಥಿ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ.
ಮೆಕಾರ್ಥಿ ಕಾಲಿನ್ ಬ್ಯಾಂಕ್ನಿಂದ 100 ಡಾಲರ್ ಕರೆನ್ಸಿ ನೋಟುಗಳನ್ನು ಡ್ರಾ ಮಾಡಿಕೊಂಡಿದ್ದು, ಈ ಹಣಗಳನ್ನು ಅಮೆರಿಕದ ಜನನಿಬಿಡ ಹೆದ್ದಾರಿಯಲ್ಲಿ ಎಸೆದಿದ್ದಾನೆ. ಹಣವನ್ನು ಉಡುಗೊರೆಯಾಗಿ ನೀಡುವ ಮೂಲಕ ಇತರರಿಗೆ ನೆರವಾಗುತ್ತಿದ್ದೇನೆ ಎಂದು ಮೆಕಾರ್ಥಿಹೇಳಿಕೊಂಡಿದ್ದಾನೆ. ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದು ಹಣ ಪಡೆದುಕೊಳ್ಳಲು ಮುಗಿ ಬಿದ್ದಿದ್ದಾರೆ.
ಮೆಕಾರ್ಥಿ ತಮ್ಮ ಜಂಟಿ ಬ್ಯಾಂಕ್ಖಾತೆಯನ್ನು ಖಾಲಿ ಮಾಡಿದ್ದು, ಇದರಿಂದ ನಮ್ಮ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿಗೆ ಬಂದು ತುಲುಪಿದೆ ಎಂದು ಗೋಳಾಡಿದ್ದಾರೆ. ಜೊತೆಗೆ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರು ದಾಖಲಾಗಿದ್ದರೂ ಪೊಲೀಸರು ಕಾಲಿನ್ನನ್ನು ಬಂಧಿಸಲಿಲ್ಲ ಮತ್ತು ಯಾವುದೇ ಅಪರಾಧದ ಆರೋಪ ಹೊರಿಸಲಿಲ್ಲ. ಏಕೆಂದರೆ ಅವನು ಶ್ರೀಮಂತನೆಂದು ಹೇಳಿಕೊಂಡು ,ಇತರರ ಜೀವನವನ್ನು ಸುಧಾರಿಸಲು ಕೋಟ್ಯಾಂತರ ಮೌಲ್ಯದ ಹಣವನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಕುಟುಂಬ ಸದಸ್ಯರು ತಮಗಾಗಿ ವಿಶೇಷ ಬ್ಯಾಂಕ್ ಖಾತೆಯನ್ನು ತೆರೆದು ತಮ್ಮ ಹಣವನ್ನು ಅದರಲ್ಲಿ ಇರಿಸಿಕೊಳ್ಳಲು ಪೋಲಿಸರು ಸಲಹೆ ನೀಡಿದ್ದಾರೆ.